‘ಟಾಕ್ಸಿಕ್’ ಚಿತ್ರದ ಐದನೇ ನಾಯಕಿ ರುಕ್ಮಿಣಿ ವಸಂತ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಗ್ಲ್ಯಾಮರ್ ಲುಕ್‌ನಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದು ಅವರ ಪಾತ್ರದ ಹೆಸರು ಮೆಲ್ಲಿಸಾ. ಕಳೆದೊಂದು ತಿಂಗಳಿಂದ ‘ಟಾಕ್ಸಿಕ್’ ಚಿತ್ರತಂಡ ತಮ್ಮ ಚಿತ್ರದ ನಟಿಯರ ಪರಿಚಯ ಮಾಡಿಕೊಡುತ್ತಿದೆ. ಇದೀಗ ಚಿತ್ರದ ಐದನೇ ನಾಯಕಿ ರುಕ್ಮಿಣಿ ವಸಂತ್ ಇಂಟ್ರುಡಕ್ಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಒಟ್ಟು ಐವರು ನಾಯಕಿಯ ಅನಾವರಣ ಆಗಿದೆ.
‘ಟಾಕ್ಸಿಕ್ ಚಿತ್ರದಲ್ಲಿ ನಟಿಸುವುದು ಕನಸಾಗಿತ್ತು. ಅದು ಈಡೇರಿದೆ. ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕೆ ಆಭಾರಿ’ ಎಂದು ರುಕ್ಮಿಣಿ ವಸಂತ್ ಹೇಳಿಕೊಂಡಿದ್ದಾರೆ.
ಟಾಕ್ಸಿಕ್ ಚಿತ್ರದಲ್ಲಿ ಐವರು ಖ್ಯಾತ ನಟಿಯರು ನಟಿಸಿದ್ದಾರೆ. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ಬಹುಭಾಷಾ ನಟಿ ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ನಾಯಕಿಯರು ಆಗಿದ್ದಾರೆ.
ಜನವರಿ 8ಕ್ಕೆ ಯಶ್ ಹುಟ್ಟುಹಬ್ಬವಿದ್ದು ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದೆ. ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರ ಮಾರ್ಚ್ 19ರಂದು ತೆರೆಗೆ ಬರಲಿದೆ.
—–





Be the first to comment