ಜೂ. NTR ಮುಂದಿನ ಸಿನಿಮಾಗೆ ಕನ್ನಡದ ನಟಿ ನಾಯಕಿ

ಜೂನಿಯರ್ ಎನ್ ಟಿ ಆರ್ ನಟನೆಯ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸಲಿದ್ದಾರೆ. ಈ ಸಿನಿಮಾ ಮುಹೂರ್ತ ಕೆಲ ವಾರಗಳ ಹಿಂದಷ್ಟೆ ನಡೆದಿದ್ದು, ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ. ಈ ಸಿನಿಮಾದಲ್ಲಿ ಪ್ರಶಾಂತ್ ನೀಲ್, ಕನ್ನಡದ ನಟಿ ರುಕ್ಮಿಣಿ ವಸಂತ್ ಗೆ ದೊಡ್ಡ ಅವಕಾಶವನ್ನು ನೀಡಿದ್ದಾರೆ. ರುಕ್ಮಿಣಿ ವಸಂತ್  ಈ ಅವಕಾಶವನ್ನು ಒಪ್ಪಿಕೊಂಡಿದ್ದಾರೆ.

ಸಿನಿಮಾದಲ್ಲಿ ರುಕ್ಮಿಣಿ ಅವರದ್ದು ಡೀ-ಗ್ಲಾಮರಸ್ ಪಾತ್ರ ಎನ್ನಲಾಗುತ್ತಿದೆ. ಮಾತ್ರವಲ್ಲದೆ ಜೂ ಎನ್​ಟಿಆರ್  ಸಿನಿಮಾದಲ್ಲಿ ಎರಡು ಶೇಡ್​ನಲ್ಲಿ ನಟಿಸಲಿದ್ದು, ರುಕ್ಮಿಣಿ ವಸಂತ್​ಗೆ  ಎರಡು ಷೇಡ್​ನ ಪಾತ್ರವಿದೆ ಎನ್ನಲಾಗುತ್ತಿದೆ.

ರುಕ್ಮಿಣಿ ವಸಂತ್  ನಟನೆಯ ‘ಬಘೀರ’ ಸಿನಿಮಾ  ಬಿಡುಗಡೆ ಕಾಣುತ್ತಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಕ್ಕೂ ಮುಂಚೆಯೇ ಆ ಸಿನಿಮಾದಲ್ಲಿ ಅವರು ನಟಿಸಿದ್ದರು. ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾದಲ್ಲಿಯೂ ರುಕ್ಮಿಣಿ ನಟಿಸಿದ್ದು ಆ ಸಿನಿಮಾ  ಶೀಘ್ರವೇ ತೆರೆಗೆ ಬರಲಿದೆ.

ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಜೊತೆಗೆ ರುಕ್ಮಿಣಿ ವಸಂತ್  ನಟಿಸಿರುವ ‘ಏಸ್’ ಸಿನಿಮಾ  ಚಿತ್ರೀಕರಣ ಮುಗಿಸಿದ್ದು  ಶೀಘ್ರವೇ ತೆರೆಗೆ ಬರಲಿದೆ. ಇತ್ತೀಚೆಗಷ್ಟೆ ತಮಿಳಿನ ಶಿವಕಾರ್ತಿಕೇಯನ್ ನಟನೆಯ ಹೊಸ ಸಿನಿಮಾವನ್ನು ರುಕ್ಮಿಣಿ ಒಪ್ಪಿಕೊಂಡಿದ್ದಾರೆ.

ಜೂ. ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಕೆಲವೇ ತಿಂಗಳಲ್ಲಿ ಜೂ. ಎನ್​ಟಿಆರ್ ನಟನೆಯ ಮೊದಲ ಹಿಂದಿ ಸಿನಿಮಾ ‘ಫೈಟರ್’ ತೆರೆಗೆ ಬರಲಿದೆ. ‘ಫೈಟರ್’ ಸಿನಿಮಾದ ಚಿತ್ರೀಕರಣ  ಬಹುತೇಕ ಮುಗಿದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!