‘ಆಪರೇಷನ್ ಆಲಮೇಲಮ್ಮ’, ‘ಕವಲು ದಾರಿ’ ಸಿನಿಮಾ ಖ್ಯಾತಿಯ ಕಲಾವಿದ ರಿಷಿ ಅವರ “ರುದ್ರ ಗರುಡ ಪುರಾಣ” ಚಿತ್ರವನ್ನು ಡಿಸೆಂಬರ್ 27ರಂದು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರುವ ಕಾರಣ ನಿರ್ಮಾಪಕರು ಚಿತ್ರವನ್ನು ಜನವರಿ 24ರಂದು ರಿಲೀಸ್ ಮಾಡಲು ಮುಂದಾಗಿದ್ದಾರೆ.
25 ವರ್ಷಗಳ ಹಿಂದೆ ಬಸ್ ಅಪಘಾತ ಆದಾಗ ಅದರಲ್ಲಿ ಎಲ್ಲರೂ ಸಾಯುತ್ತಾರೆ. ಆದರೆ ಅದೇ ಬಸ್ ಹಾಗೂ ಪ್ರಯಾಣಿಸುತ್ತಿದ್ದ ಜನರು ಮತ್ತೆ ವಾಪಸ್ ಬರುವ ತಿರುವುಗಳನ್ನು ಈ ಚಿತ್ರ ಹೊಂದಿದೆ. ಕೆಲವರು ಈ ಚಿತ್ರವನ್ನು ತಮಿಳು ಚಿತ್ರ ಡೈರಿ ಇದರ ರಿಮೇಕ್ ಎಂದು ಹೇಳುತ್ತಾರೆ. ಅದೇ ಇದು ರಿಮೇಕ್ ಚಿತ್ರ ಅಲ್ಲ ಎಂದು ನಿರ್ದೇಶಕ ನಂದೀಶ ಹೇಳಿದ್ದಾರೆ.
‘ರುದ್ರ ಗರುಡ ಪುರಾಣ’ ಸಿನಿಮಾದಲ್ಲಿ ರಿಷಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕ ಕುಮಾರ್ ಚಿತ್ರದ ನಾಯಕಿ ಆಗಿ ನಟಿಸಿದ್ದಾರೆ. ಡಿಯರ್ ವಿಕ್ರಂ ಚಿತ್ರವನ್ನು ನಿರ್ದೇಶಿಸಿದ್ದ ಕೆ ಎಸ್ ನಂದೀಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
Be the first to comment