ನಿರ್ದೇಶಕ : ಸಮರ್ಥ. ಎಂ
ನಿರ್ಮಾಪಕ : ವಿಜಯ ಕುಮಾರ್
ತಾರಾಗಣ: ಕಾರ್ತಿಕ್, ದಿಶಾ ಪೂವಯ್ಯ, ಅಮೃತ, ಭವ್ಯ, ಹೇಮಂತ್, ಬಾಲ ರಾಜವಾಡಿ, ಶೋಭ್ ರಾಜ್, ಸಂಗೀತಾ, ಲೋಕನಾಥ್ ಇತರರು
ರೇಟಿಂಗ್: 3.5/5
ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಹಾರರ್ ಅಂಶಗಳೊಂದಿಗೆ ಪ್ರೇಮಿಗಳಿಬ್ಬರ ಜನ್ಮ ಜನ್ಮಾಂತರದ ಕಥೆಯಾಗಿ ರುಧೀರ ಕಣಿವೆ ಮೂಡಿ ಬಂದಿದೆ.
ಭೂ ತಜ್ಞರ ಸಹಕಾರದೊಂದಿಗೆ ದಟ್ಟ ಅರಣ್ಯದಲ್ಲಿ ನಿಧಿಯ ಸುಳಿವು ಪತ್ತೆ ಹಚ್ಚುವ ರೌಡಿಗಳು. ಇವರಿಗೆ ಪೊಲೀಸರ ಬೆಂಬಲ ಬೇರೆ. ಹೊಡೆದಾಟ, ಬಡೆದಾಟದ ನಡುವೆ ನಿಧಿಗಾಗಿ ಭೂಮಿ ಅಗೆಯುವಾಗ ಆತ್ಮ ಪ್ರತ್ಯಕ್ಷವಾಗುತ್ತದೆ. ಅದು ತನ್ನ ಸಾವಿಗೆ ಕಾರಣರಾದವರನ್ನು ಸಂಹರಿಸಲು ಬಯಸುತ್ತದೆ. ಇದರ ಹಿಂದೆ ಫ್ಲಾಶ್ ಬ್ಯಾಕ್ ಸ್ಟೋರಿ ಶುರು ಆಗುತ್ತದೆ.
ಊರಿನಲ್ಲಿರುವ ಶ್ರೀಮಂತ ವ್ಯಕ್ತಿಯ ಮಗ ಹಾಗೂ ವೇಶ್ಯಾವಾಟಿಕೆಯಲ್ಲಿ ಸಿಲುಕಿರುವಳ ಮಗಳು ಪ್ರೀತಿಸುವ ವಿಚಾರದ ಕಥೆ ಬರುತ್ತದೆ. ಹುಡುಗಿಯ ಸಾವಿಗೆ ಕಾರಣ ಏನು? ಪುನರ್ಜನ್ಮ ಯಾಕೆ ? ಶಿಕ್ಷೆ ಸಿಗುವುದು ಯಾರಿಗೆ?
ರುಧೀರ ಕಣಿವೆಯಲ್ಲಿ ನಿಧಿ ಸಿಗುತ್ತಾ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿನಿಮಾ ನೀಡುತ್ತದೆ.
ಚಿತ್ರದಲ್ಲಿ ಒಂದಷ್ಟು ಪ್ರಮುಖ ಪಾತ್ರಗಳು ಗಮನ ಸೆಳೆಯುತ್ತವೆ. ಸಾಹಸ ಸನ್ನಿವೇಶಗಳು, ಹಿನ್ನೆಲೆ ಸಂಗೀತ, ಗ್ರಾಫಿಕ್ಸ್ ಹಿತ ಅನಿಸುತ್ತವೆ.
ಸಸ್ಪೆನ್ಸ್ ಹಾಗೂ ಹಾರರ್ ಚಿತ್ರವನ್ನು ಇಷ್ಟಪಡುವವರಿಗೆ ಈ ಚಿತ್ರ ಹಿಡಿಸಬಲ್ಲದು.
______
Be the first to comment