ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ʼಆರ್ ಆರ್ ಆರ್ʼ ಆಸ್ಕರ್ ಬಳಿಕ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಗೆ ನಾಮಿನೇಟ್ ಆಗಿದೆ.
ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ʼ ನ ಎರಡು ವಿಭಾಗದಲ್ಲಿ ‘ಆರ್ ಆರ್ ಆರ್’ ಸಿನಿಮಾ ನಾಮಿನೇಟ್ ಆಗಿದೆ.
ಸೂಪರ್ ಹೀರೋ, ಸೈನ್ಸ್ ಫೀಕ್ಷನ್, ಹಾರಾರ್, ಆಯಕ್ಷನ್ ,ಫ್ಯಾಂಟಸಿ ಸಿನಿಮಾ ಹಾಗೂ ಓಟಿಟಿ ಶೋಗಳಿಗೆ ಪ್ರಶಸ್ತಿ ನೀಡುವ ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ʼ ನ 3ನೇ ವಾರ್ಷಿಕ ಪ್ರಶಸ್ತಿಯಲ್ಲಿ ಅತ್ತುತ್ತಮ ಆಯಕ್ಷನ್ ಮೂವಿ ಹಾಗೂ ಬೆಸ್ಟ್ ಆಯಕ್ಟರ್ ಇನ್ ಆಯಕ್ಷನ್ ಮೂವಿ ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿದೆ.
‘ಬುಲೆಟ್ ಟ್ರೈನ್’, ‘ಟಾಪ್ ಗನ್: ಮೇವರಿಕ್’, ‘ದಿ ಅನ್ ಬೇರೆಬಲ್ ವೇಟ್ ಆಫ್ ಮ್ಯಾಸಿವ್ ಟ್ಯಾಲೆಂಟ್ ,’ದಿ ವುಮನ್ ಕಿಂಗ್’ ಚಿತ್ರಗಳೊಂದಿಗೆ ಬೆಸ್ಟ್ ಆಯಕ್ಷನ್ ಮೂವಿ ವಿಭಾಗದಲ್ಲಿ ʼಆರ್ ಆರ್ ಆರ್ʼ ಸ್ಪರ್ಧಿಸಲಿದೆ.
ಬೆಸ್ಟ್ ಆಯಕ್ಟರ್ ಇನ್ ಆಯಕ್ಷನ್ ಮೂವಿ ವಿಭಾಗದಲ್ಲಿ ರಾಮ್ ಚರಣ್, ಜೂ.ಎನ್.ಟಿ.ಆರ್ ಇಬ್ಬರೂ ನಾಮಿನೇಟ್ ಆಗಿದ್ದಾರೆ. ಟಾಮ್ ಕ್ರೂಸ್, ಬ್ರಾಡ್ ಪಿಟ್ ಮತ್ತು ನಿಕೋಲಸ್ ಕೇಜ್ ಈ ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿರುವ ಇತರ ನಟರು ಆಗಿದ್ದಾರೆ.
ಮಾರ್ಚ್ 16 ರಂದು ವಿಜೇತರ ಪಟ್ಟಿ ಹೊರ ಬೀಳಲಿದೆ. ಆರ್ ಆರ್ ಆರ್ ಪ್ರಶಸ್ತಿ ಪಡೆಯುವುದೇ ಎಂದು ಕಾದು ನೋಡಬೇಕಿದೆ.
___

Be the first to comment