ಬಹುನಿರೀಕ್ಷಿತ ‘ಆರ್‌ಆರ್‌ಆರ್‌’ ಟ್ರೈಲರ್ ರಿಲೀಸ್

ಜ್ಯೂ. ಎನ್​ಟಿಆರ್, ಮತ್ತು ರಾಮ್​ ಚರಣ್ ನಟನೆಯ ‘ಆರ್‌ಆರ್‌ಆರ್‌’ ಚಿತ್ರದ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಚಿತ್ರ ಆಕ್ಷನ್ ಮೂಲಕ ಗಮನ ಸೆಳೆದಿದೆ.

ರಾಜಮೌಳಿ ನಿರ್ದೇಶನದ ಈ ಚಿತ್ರದ ಟ್ರೇಲರ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗುವುದಕ್ಕೂ ಮುನ್ನ ರಾಜ್ಯದ 30 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ದೊಡ್ಡ ತೆರೆಯಲ್ಲಿ ಟ್ರೈಲರ್ ಕಂಡು ಸಿನಿಪ್ರಿಯರು ಸಂತಸಗೊಂಡಿದ್ದಾರೆ.

‘ಆರ್‌ಆರ್‌ಆರ್‌’ ಚಿತ್ರವನ್ನು ಡಿವಿವಿ ದಾನಯ್ಯ ಅವರು 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ‘ಆರ್‌ಆರ್‌ಆರ್‌’ ಚಿತ್ರದ ಕರ್ನಾಟಕ ವಿತರಣೆ ಹಕ್ಕನ್ನು ‘ಕೆವಿಎನ್‌’ ಪ್ರೊಡಕ್ಷನ್ಸ್ ಸಂಸ್ಥೆ ಪಡೆದುಕೊಂಡಿದೆ.

ರಾಮ್ ಚರಣ್, ಜೂನಿಯರ್ ಎನ್.ಟಿ.ಆರ್ , ಅಜಯ್ ದೇವ್‌ಗನ್, ಆಲಿಯಾ ಭಟ್ ಅಭಿನಯದ ಈ ಚಿತ್ರದ ಟ್ರೈಲರ್ ಇಂದು ಬೆಳಗ್ಗೆ 10 ಗಂಟೆಗೆ ಬೆಳ್ಳಿ ಪರದೆಯ ಮೇಲೆ ಪ್ರದರ್ಶನ ಆಯಿತು.

ಬೆಂಗಳೂರಿನ ಲಾಲ್‌ಬಾಗ್ ರಸ್ತೆಯ ಊರ್ವಶಿ, ಮಾಗಡಿ ರಸ್ತೆಯ ಅಂಜನ್, ಆಗರದ ತಿರುಮಲ, ಕೆ.ಆರ್.ಪುರಂನ ವೆಂಕಟೇಶ್ವರ, ಬಿ.ಎನ್.ಪುರದ ಪುಷ್ಪಾಂಜಲಿ, ಜೆ.ಪಿ.ನಗರದ ಸಿದ್ಧೇಶ್ವರ, ಎಂ.ಜಿ.ರಸ್ತೆಯ ಸ್ವಾಗತ್ ಶಂಕರ್‌ನಾಗ್, ಸ್ಯಾಂಕೀ ರಸ್ತೆಯ ಕಾವೇರಿ, ಸೇವಾ ನಗರದ ಮುಕುಂದ, ಜೆ.ಪಿ.ನಗರದ ರೇಣುಕಾ ಪ್ರಸನ್ನ, ಕೋಣನಕುಂಟೆಯ ಮಾನಸ, ಹೋಂಗಸಂದ್ರದ ಬೃಂದಾ, ಆರ್‌.ಟಿ.ನಗರದ ರಾಧಾಕೃಷ್ಣ, ಸಂಜಯ್‌ ನಗರದ ವೈಭವ್, ಮಾರತಹಳ್ಳಿಯ ವಿನಾಯಕ, ಕೋಲಾರದ ನಾರಾಯಣಿ, ಚಿಕ್ಕಬಳ್ಳಾಪುರದ ಬಾಲಾಜಿ, ಪಾವಗಡದ ಮಾರುತಿ, ಮುಳಬಾಗಿಲಿನ ವರದರಾಜ್, ದೊಡ್ಡಬಳ್ಳಾಪುರದ ವೈಭವ್, ವಿಜಿಪುರದ ಗೌರಿಶಂಕರ, ಮೈಸೂರಿನ ಡಿ.ಆರ್‌.ಸಿ., ದಾವಣಗೆರೆಯ ವಸಂತ, ಬಳ್ಳಾರಿಯಲ್ಲಿರುವ ರಾಧಿಕಾ-ರಾಘವೇಂದ್ರ-ನಟರಾಜ ಕಾಂಪ್ಲೆಕ್ಸ್, ಹೊಸಪೇಟೆಯ ಬಾಲ, ಸಿರಗುಪ್ಪದ ಬಾಲಾಜಿ, ಕಂಪ್ಲಿಯ ಭಾರತ್, ಕುರುಗೋಡಿನ ಎಸ್.ಎಲ್.ವಿ, ತೋರಣಗಲ್ಲಿನ ವಿಜಯಲಕ್ಷ್ಮಿ, ಸಂಡೂರಿನ ವಿಶಾಲ್ , ಕಂಪ್ಲಿಯ ಚಂದ್ರಕಲಾ ಚಿತ್ರಮಂದಿರಗಳಲ್ಲಿ ‘ಆರ್‌ಆರ್‌ಆರ್‌’ ಚಿತ್ರದ ಟ್ರೈಲರ್ ಬಿಡುಗಡೆ ಆಯಿತು.

‘ಆರ್‌ಆರ್‌ಆರ್‌’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ. ಈ ಚಿತ್ರದಲ್ಲಿ ಸೀತಾರಾಮರಾಜು ಪಾತ್ರದಲ್ಲಿ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಮುಂದಿನ ವರ್ಷದ ಜನವರಿ 7ರಂದು ‘ಆರ್​ಆರ್​ಆರ್​’ ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದೆ.
___

https://youtu.be/_7kEpALVNsY

Be the first to comment

Leave a Reply

Your email address will not be published. Required fields are marked *

Translate »
error: Content is protected !!