ಮುಂದಕ್ಕೆ ಹೋಯ್ತು ಆರ್ ಆರ್ ಆರ್ ರಿಲೀಸ್

ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಮೊದಲ ಸ್ಥಾನದಲ್ಲಿ ಇದ್ದ ಈ ಚಿತ್ರ ಜನವರಿ 7ರಂದು ರಿಲೀಸ್ ಆಗಬೇಕಿತ್ತು. ಜ್ಯೂ.ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್​, ಅಜಯ್​ ದೇವಗನ್​ ನಟನೆಯ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಆದರೆ ಹಲವು ರಾಜ್ಯಗಳಲ್ಲಿ ಥಿಯೇಟರ್ ಬಂದ್ ಆಗಿರುವ ಕಾರಣ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ.

” ನಮ್ಮ ಅಪರಿಮಿತ ಪ್ರಯತ್ನದ ಹೊರತಾಗಿಯೂ, ಕೆಲವೊಂದು ಸಂದರ್ಭಗಳು ನಮ್ಮ ನಿಯಂತ್ರಣವನ್ನು ಮೀರಿ ಹೋಗಿದೆ. ದೇಶದ ಹಲವು ರಾಜ್ಯಗಳಲ್ಲಿ ಥಿಯೇಟರ್ ಗಳನ್ನು ಬಂದ್ ಮಾಡಲಾಗುತ್ತಿದೆ. ಈ ಕಾರಣದಿಂದ ನೀವು ಕಾತರತೆಯನ್ನು ಇನ್ನಷ್ಟು ದಿನ ವಿಸ್ತರಣೆ ಮಾಡಬೇಕಿದೆ. ನಾವು ಸೂಕ್ತ ಸಮಯದಲ್ಲಿ ಭಾರತದ ಸಿನಿಮಾದ ವೈಭವವನ್ನು ತೋರಿಸುವ ಭರವಸೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ ” ಎಂದು ಚಿತ್ರತಂಡ ಹೇಳಿದೆ.

ಆರ್​ಆರ್​ಆರ್​’ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಜನವರಿ ಏಳರಂದು ಹಲವು ಚಿತ್ರಗಳು ತಮ್ಮ ಚಿತ್ರ ಬಿಡುಗಡೆಯನ್ನು ಮುಂದೆ ಹಾಕಿದ್ದವು. ಇವುಗಳಲ್ಲಿ ಗಂಗೂಬಾಯಿ ಕಾಥೀಯಾವಾಡಿ, ಭೀಮ್ಲಾ ನಾಯಕ್, ಸರ್ಕಾರು ವಾರಿ ಪಾಠ, ಫನ್ 3 ಚಿತ್ರಗಳು ಸೇರಿವೆ. ಆರ್​ಆರ್ ಆರ್ ಚಿತ್ರದ ರಿಲೀಸ್‌ ಮುಂದಕ್ಕೆ ಹೋಗಿರುವ ಕಾರಣ ಈ ಚಿತ್ರಗಳು ಬಿಡುಗಡೆಗೆ ಮತ್ತೆ ಯೋಜನೆ ರೂಪಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
‘ಆರ್‌ಆರ್‌ಆರ್‌’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ. ಈ ಚಿತ್ರದಲ್ಲಿ ಸೀತಾರಾಮರಾಜು ಪಾತ್ರದಲ್ಲಿ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಸಾಕಷ್ಟು ಕುತೂಹಲ ಉಂಟು ಮಾಡಿದೆ.
ಆದರೆ ತೆರೆಯ ಮೇಲೆ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಇನ್ನಷ್ಟು ಕಾಯಬೇಕಿದೆ. ಮುಂದಿನ ಕೆಲ ದಿನಗಳಲ್ಲಿ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!