ದಾಖಲೆ ಮೊತ್ತಕ್ಕೆ” ಆರ್ ಆರ್ ಆರ್” ಆಡಿಯೋ ಮಾರಾಟ

ಖ್ಯಾತ ತೆಲುಗು ಚಿತ್ರ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದ ‘ಆರ್ ಆರ್ ಆರ್ ‘ ಸಿನಿಮಾದ ಆಡಿಯೋ ಹಕ್ಕು ದಾಖಲೆ ಹಣಕ್ಕೆ ಮಾರಾಟವಾಗಿದೆ.

“ಆರ್ ಆರ್ ಆರ್” ಸಿನಿಮಾದ ಆಡಿಯೋವನ್ನು ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ 25 ಕೋಟಿ ರೂಪಾಯಿ ಗಳಿಗೆ ಖರೀದಿ ಮಾಡಿದ್ದು ಇದು ಲಹರಿ ಸಂಸ್ಥೆ, ಕೆಜಿಎಫ್-2 ಸಿನಿಮಾದ ಆಡಿಯೋ ಖರೀದಿ ಹಕ್ಕಾದ 7.20 ಕೋಟಿ ರೂ.ಗಳ ದಾಖಲೆಯನ್ನು ಮುರಿದಿದೆ.
ಆಡಿಯೋ ಹಕ್ಕು ಖರೀದಿ ಮಾಡಿದ ಬಗ್ಗೆ ಟಿ ಸಿರೀಸ್ ಮತ್ತು ಲಹರಿ ಸಂಸ್ಥೆಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿವೆ. ಆದರೆ ವ್ಯವಹಾರದ ಮೊತ್ತದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಐದಕ್ಕಿಂತ ಹೆಚ್ಚು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಆರ್ ಆರ್ ಆರ್ ಸಿನಿಮಾಕ್ಕೆ ಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಜೂ.ಎನ್ ಟಿ ಆರ್ ಅವರು ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರ ನಿರ್ವಹಿಸಿದ್ದಾರೆ.
ಹಿಂದಿಯ ಖ್ಯಾತ ನಟ ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ಮಾಡುತ್ತಿದ್ದಾರೆ. ಚಿತ್ರ ಅಕ್ಟೋಬರ್ 13ಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ.

ಆರ್ ಆರ್ ಆರ್ ಸಿನೆಮಾ ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಆರ್ ಆರ್ ಆರ್ ಸಿನಿಮಾ ಬಿಡುಗಡೆಯೂ ಮೊದಲೇ ಕೋಟಿ ಕೋಟಿ ಬಾಚಿಕೊಳ್ಳುತ್ತಿದ್ದು ಸದ್ದು ಮಾಡುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!