ರಾಜಮೌಳಿ ನಿರ್ದೇಶನದ ಆಕ್ಷನ್ ಚಿತ್ರ ‘ಆರ್‌ಆರ್‌ಆರ್’ ಇಂಗ್ಲಿಷ್ ಹೊರತಾದ ಭಾಷಾ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಹಾಲಿವುಡ್ ಫಾರಿನ್ ಪ್ರೆಸ್ ಅಸಅಸೋಸಿಯೇಷನ್, ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನ ಅಧಿಕೃತ ಟ್ವಿಟರ್ ಪುಟದಲ್ಲಿ ಪ್ರಕಟಣೆಯನ್ನು ಹಂಚಿಕೊಂಡಿದೆ.
ಪ್ಯಾನ್-ಇಂಡಿಯಾ ಬ್ಲಾಕ್ ಬಸ್ಟರ್ ‘RRR’, , ಕೊರಿಯನ್ ರೊಮ್ಯಾಂಟಿಕ್ ಮಿಸ್ಟರಿ ಚಲನಚಿತ್ರ ‘ಡಿಸಿಷನ್ ಟು ಲೀವ್’, ಜರ್ಮನ್ ಯುದ್ಧ-ವಿರೋಧಿ ಚಿತ್ರ ‘ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್’, ಅರ್ಜೆಂಟೀನಾದ ಐತಿಹಾಸಿಕ ‘ಅರ್ಜೆಂಟೀನಾ 1985″ ಮತ್ತು ಫ್ರೆಂಚ್- ಡಚ್ ‘ ಕ್ಲೋಸ್ ‘ ನಾಮನಿರ್ದೇಶನಗೊಂಡ ಚಿತ್ರಗಳು ಆಗಿವೆ.
ತೆಲುಗು ಮೂಲ ಭಾಷೆಯ ಚಲನಚಿತ್ರವನ್ನು ರಾಜಮೌಳಿ ನಿರ್ದೇಶಿಸಿದ್ದು, ವಿ. ವಿಜಯೇಂದ್ರ ಪ್ರಸಾದ್ ಸಹ-ಕಥೆಗಾರ ರಾಗಿ ಕೆಲಸ ಮಾಡಿದ್ದಾರೆ. ಇದನ್ನು ಡಿವಿವಿ ಎಂಟರ್‌ಟೈನ್‌ಮೆಂಟ್‌ನ ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ , ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶ್ರಿಯಾ ಸರನ್, ಅಲಿಸನ್ ಡೂಡಿ, ಒಲಿವಿಯಾ ಮೋರಿಸ್ ಮೊದಲಾದ ನಟರು ನಟಿಸಿದ್ದಾರೆ.
___
Be the first to comment