‘ರಾಯಲ್ ಮೆಕ್’ ಚಿತ್ರ ನವೆಂಬರ್ 10 ರಂದು ಬಿಡುಗಡೆ

ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಧನುಷ್ ಅಭಿನಯದ ರಾಯಲ್ ಮೆಕ್ ಚಿತ್ರ ನವೆಂಬರ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಾಂಕ್ರಾಮಿಕ ರೋಗದ ಸಮಯದಲ್ಲಿ ಧನುಷ್  ಅವರು ಎದುರಿಸಿದ ನೈಜ ಘಟನೆಯನ್ನು ಆಧರಿಸಿ ಚಿತ್ರವನ್ನು ತಯಾರಿಸಲಾಗಿದೆ. ಚಿತ್ರವು ಎಂಜಿನಿಯರ್ ಒಬ್ಬನ ಕಥೆಯನ್ನು ಹೇಳುತ್ತದೆ.  ಸ್ಕ್ರಿಪ್ಟ್ ಬರೆಯುವುದಷ್ಟೇ ಅಲ್ಲದೆ ಧನುಷ್  ನಿರ್ಮಾಣ, ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ.

ಧನುಷ್ ಅವರು ಕೆಲ ಸಂದರ್ಭಗಳಲ್ಲಿ ಫುಡ್ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡುತ್ತಾರೆ. ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸು ಮಾಡಲು ಸಾಧ್ಯವಾಗುತ್ತದೆಯಾ? ಈ ಪ್ರಯಾಣದಲ್ಲಿ ಅವರು ಎದುರಿಸುವ ಸವಾಲುಗಳ ಕುರಿತು ಚಿತ್ರ ಹೇಳುತ್ತದೆ.

ಚಿತ್ರವನ್ನು ಶಬರಿ ಫಿಲ್ಮ್ಸ್ ನಿರ್ಮಾಣ ಮಾಡಿದ್ದು, ಜೆಎಚ್‌ಎಂ ನಾಗಭೂಷಣ್ ಮತ್ತು ಡಾ. ಜಯದೇವ ಹಾಸನ್ ಅವರ ಸಹ-ನಿರ್ದೇಶನ ಚಿತ್ರಕ್ಕಿದೆ. ಸಾತ್ವಿಕಾ ರಾವ್ ಅಲಿಯಾಸ್ ಶ್ರಾವ್ಯಾ ರಾವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ರಾಘವೇಂದ್ರ ರಾಜ್ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕುರಿ ಪ್ರತಾಪ್, ರಮೇಶ್ ಭಟ್, ವಿನಯ್ ಪ್ರಸಾದ್, ರೇಖಾ ದಾಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪವನ್ ಮತ್ತು ಗೌತಮಿ ಜಯರಾಂ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!