‘K47’ ಚಿತ್ರತಂಡ ಸೇರಿದ ರೋಶನಿ ಪ್ರಕಾಶ್

ಸುದೀಪ್ ಅವರ ಮುಂಬರುವ ಆ್ಯಕ್ಷನ್ ಚಿತ್ರ ‘ಕೆ 47’ ಚಿತ್ರಕ್ಕೆ ನಟಿ  ರೋಶನಿ ಪ್ರಕಾಶ್ ಸೇರ್ಪಡೆಗೊಳ್ಳುತ್ತಿದ್ದಾರೆ.

‘ಕವಲುದಾರಿ’ ಮತ್ತು ‘ಮರ್ಫಿ’  ಚಿತ್ರಗಳ ನಟನೆಗೆ ಹೆಸರುವಾಸಿಯಾದ ರೋಶನಿ ಪ್ರಕಾಶ್, ಈಗಾಗಲೇ ಕೆ47 ಗಾಗಿ ತಮ್ಮ ಆರಂಭಿಕ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಬಹು ಭಾಷೆಗಳಲ್ಲಿ ರೋಶನಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

‘ ಚಿತ್ರದ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ.  ನಾನು ಕಮರ್ಷಿಯಲ್ ಸಿನಿಮಾದ ಡೈನಾಮಿಕ್ಸ್ ನ್ನು ಅರ್ಥಮಾಡಿಕೊಂಡಿದ್ದೇನೆ. ಸುದೀಪ್ ಅವರಂತಹ ಪ್ಯಾನ್ ಇಂಡಿಯಾ ತಾರೆಯೊಂದಿಗೆ ಕೆಲಸ ಮಾಡುವುದು ಒಬ್ಬರ ವೃತ್ತಿಜೀವನದಲ್ಲಿ ಮೈಲಿಗಲ್ಲುಗಳಂತೆ ಭಾಸವಾಗುತ್ತದೆ. ಕೆ47 ನಲ್ಲಿ ಕೆಲಸ ಮಾಡುವುದರಿಂದ ನನಗೆ ವೃತ್ತಿಪರವಾಗಿ ಬೆಳೆಯಲು, ದೊಡ್ಡ ಕ್ಯಾನ್ವಾಸ್‌ನಲ್ಲಿ ಚಿತ್ರ ನಿರ್ಮಾಣದ ತಾಂತ್ರಿಕ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರತಿಭಾನ್ವಿತ ತಂಡದೊಂದಿಗೆ ಸಹಕರಿಸಲು ಅವಕಾಶ ನೀಡುತ್ತದೆ ‘ ಎಂದು ರೋಶನಿ ಪ್ರಕಾಶ್ ಅವರು ಹೇಳಿದ್ದಾರೆ.

‘ಕೆ 47’ ಚಿತ್ರಕ್ಕೆ ಮ್ಯಾಕ್ಸ್ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಮ್ಯಾಕ್ಸ್‌ ಚಿತ್ರದ  ಪ್ರಮುಖ ತಾಂತ್ರಿಕ ತಂಡವೇ ಕೆಲಸ ಮಾಡುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಾಹಕರಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!