ಡಾರ್ಲಿಂಗ್ ಕೃಷ್ಣಹಾಗೂ ರಚಿತಾ ರಾಮ್ ಅಭಿನಯದ ‘ಲವ್ ಮಿ OR ಹೇಟ್ ಮಿ’ ಚಿತ್ರದ ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸಲಿದ್ದಾರೆ.
ದೀಪಕ್ ಗಂಗಾಧರ್ ಅವರ ಚೊಚ್ಚಲ ನಿರ್ದೇಶನದ ‘ಲವ್ ಮಿ OR ಹೇಟ್ ಮಿ’ ಚಿತ್ರದ ಸುಮಾರು ಶೇ 90 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಜೂನ್ ತಿಂಗಳಿನಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ.
ಲವ್ ಮಿ OR ಹೇಟ್ ಮಿ ಸಿನಿಮಾ ಮೂಲಕ ಕೃಷ್ಣ ಮತ್ತು ರಚಿತಾ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಲವ್ ಮಿ OR ಹೇಟ್ ಮಿ ಪ್ರೇಮಕಥೆ ಹೊಂದಿದೆ ಎಂದು ದೀಪಕ್ ಹೇಳಿದ್ದಾರೆ.
ರೂಪೇಶ್ ಶೆಟ್ಟಿ ಅಲ್ಲದೇ ಡಾರ್ಲಿಂಗ್ ಕೃಷ್ಣ ಮತ್ತು ರಚಿತಾ ರಾಮ್ ಅವರಂಥ ಪ್ರತಿಭಾವಂತ ಮತ್ತು ಅನುಭವಿ ನಟರು ಚಿತ್ರದಲ್ಲಿದ್ದಾರೆ. ಚಿತ್ರವನ್ನು ಬೆಂಗಳೂರು, ಶಿರಸಿ ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ ಎಂದು ದೀಪಕ್ ಗಂಗಾಧರ್ ಹೇಳಿದ್ದಾರೆ.
ತಾರಾಗಣದಲ್ಲಿ ರಾಕೇಶ್ ಪೂಜಾರಿ, ರಮೇಶ್ ಭಟ್ ಮತ್ತು ವೀಣಾ ಸುಂದರ್ ಇದ್ದಾರೆ. ಚಿತ್ರವನ್ನು ದೀಪಕ್ ಗಂಗಾಧರ್, ಸುನೀಲ್ ಬಿಎನ್ ಮದನ್ ಗಂಗಾಧರ್ ಮತ್ತು ಚಂದನ್ ಜಂಟಿಯಾಗಿ ನಿರ್ಮಿಸಿದ್ದಾರೆ. ಶ್ರೀಧರ್ ಸಂಭ್ರಮ್ ಮತ್ತು ನಕುಲ್ ಅಬ್ಯಾಂಕರ್ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರದ ಟೈಟಲ್ ನ್ನು ಡಾ. ರಾಜ್ ಕುಮಾರ್ ಅವರ ಶಂಕರ್ ಗುರು ಚಿತ್ರದ ಹಾಡಿನಿಂದ ತೆಗೆದುಕೊಳ್ಳಲಾಗಿದೆ.
—-
Be the first to comment