ರೂಮ್ ಬಾಯ್

Movie Review: ರೂಮ್ ಬಾಯ್ ಯ ಕನಸಿನ ಕಥೆ

ಚಿತ್ರ: ರೂಮ್ ಬಾಯ್
ನಿರ್ದೇಶನ: ರವಿ ನಾಗಡದಿನ್ನಿ
ತಾರಾ ಬಳಗ: ಲಿಖಿತ್ ಸೂರ್ಯ, ಯಶ್ ಶೆಟ್ಟಿ, ಅಶ್ವಿನಿ ಹಾಸನ್,ವರ್ಧನ್ ತೀರ್ಥಹಳ್ಳಿ, ರಘು ಶಿವಮೊಗ್ಗ,ಚೇತನ್ ದುರ್ಗ, ಇತರರು

ರೇಟಿಂಗ್: 3.5

ಉತ್ತರ ಕರ್ನಾಟಕ ಮೂಲದ ರೂಂ ಬಾಯ್ ಒಬ್ಬ ಕಾಣುವ ಕನಸಿಗೆ ವ್ಯಕ್ತಿಯೊಬ್ಬ ತಣ್ಣೀರು ಎರಚಿದಾಗ ಏನಾಗುತ್ತದೆ ಎನ್ನುವ ಬಗ್ಗೆ ತಿಳಿಸುವ ಚಿತ್ರ ಈ ವಾರ ಬಿಡುಗಡೆ ಆಗಿರುವ ರೂಮ್ ಬಾಯ್.

ಕ್ರೈಂ ಥ್ರಿಲ್ಲರ್ ಚಿತ್ರವಾಗಿರುವ ಇಲ್ಲಿ ಸಿಸಿಟಿವಿ ಫೂಟೇಜ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚಿತ್ರಕ್ಕೆ ತಿರುವನ್ನು ನೀಡುತ್ತದೆ. ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ತೊಂದರೆ ಪಡುವ ರೂಮ್ ಬಾಯ್ ಮುಂದೆ ಹೇಗೆ ಗುರಿ ಸಾಧಿಸುತ್ತಾನೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ಲಿಖಿತ್ ಸೂರ್ಯ ಅವರು 4 ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಚಿತ್ರವನ್ನು ಇಡೀ ಆವರಿಸಿಕೊಂಡಿದ್ದಾರೆ. ಉಳಿದಂತೆ ಯಶ್ ಶೆಟ್ಟಿ, ರಘು ಶಿವಮೊಗ್ಗ, ಅಶ್ವಿನಿ ಹಾಸನ್, ಚೇತನ್ ದುರ್ಗ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಅಪರಾಧ, ಪೊಲೀಸ್ ತನಿಖೆ, ಪುಂಡರ ಮೆರೆದಾಟ ಈ ಎಲ್ಲಾ ಅಂಶಗಳು ಚಿತ್ರದಲ್ಲಿವೆ. ಕ್ರೈಂ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಇಷ್ಟವಾಗುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!