ರೋಣ

‘ರೋಣ’ ಚಿತ್ರದ ಟ್ರೈಲರ್ ಬಿಡುಗಡೆ

ಯುವ ನಿರ್ದೇಶಕ ಸತೀಶ್ ಕುಮಾರ್ ಅವರ ರೋಣ ಚಿತ್ರದ ಟ್ರೈಲರ್ ನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ಪ್ರಭಾಕರ್ ಅವರು ಬಿಡುಗಡೆ ಮಾಡಿದರು.

ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರಂಗಭೂಮಿ ಪ್ರತಿಮೆಗಳು ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ರೈಲರ್ ವೀಕ್ಷಿಸಿ ಶುಭ ಹಾರೈಸಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಹೇಳಿದರು.

ಚಿತ್ರದ ನಟ ಹಾಗೂ ನಿರ್ಮಾಪಕ ರಘು ರಾಜನಂದ ಮಾತನಾಡಿ, ಈ ಚಿತ್ರವನ್ನು ಬಿ ಆರ್ ಕೆ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಲಾಗಿದೆ. ನಾನು ಕೆರೆ ಬೇಟೆಯಲ್ಲಿ ಸಣ್ಣ ಪಾತ್ರವನ್ನು ಮಾಡಿದ್ದೆ. ಆ ಬಳಿಕ ನಾನೇ ಒಂದು ಚಿತ್ರವನ್ನು ನಿರ್ಮಾಣ ಮಾಡಬೇಕು ಎಂದು ತೀರ್ಮಾನಿಸಿದ್ದೆ. ಈಗ ರೋಣ ಚಿತ್ರದಲ್ಲಿ ನಟಿಸಿ ನಿರ್ಮಾಣವನ್ನು ಮಾಡಿದ್ದೇನೆ ಎಂದು ಹೇಳಿದರು.

ರೋಣ

ನಾಯಕ ನಟಿ ಪ್ರಕೃತಿ ಪ್ರಸಾದ್ ಮಾತನಾಡಿ, ನಾನು ಸೀರಿಯಲ್ ಮಾಡುತ್ತಾ ಸಿನಿಮಾರಂಗಕ್ಕೆ ಬಂದವಳು. ಇದು ನನ್ನ ಎರಡನೇ ಚಿತ್ರ ಆಗಿದೆ. ಚಿತ್ರದಲ್ಲಿ ಅಪ್ಪ ಮಗಳ ಭಾಂದವ್ಯದ ಕುರಿತು ಹೇಳಲಾಗಿದೆ ಎಂದು ಹೇಳಿದರು.

ಚಿತ್ರದಲ್ಲಿ ಶರತ್ ಲೋಹಿತಾಶ್ವ ಅವರು ನಾಯಕನ ತಂದೆಯ ಪಾತ್ರ ಮಾಡಿದ್ದಾರೆ. ಉಳಿದಂತೆ ಮಾಲೂರು ವಿಜಯ್, ಚಿಲ್ಲರ್ ಮಂಜು, ಬಲ ರಾಜವಾಡಿ, ಸಂಗೀತ ಅನಿಲ್ ಇತರರು ನಟಿಸಿದ್ದಾರೆ.

ಚಿತ್ರಕ್ಕೆ ಅರುಣ್ ಕುಮಾರ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಗಗನ್ ಬಧೇರಿಯ ಸಂಗೀತ ಸಂಯೋಜನೆ, ವಿ ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಕಿನ್ನಾಳ ರಾಜ್ ಸಾಹಿತ್ಯ ಇದೆ. ರಮೇಶ್ ಅವರ ಕಥೆ ಹಾಗೂ ಚಿತ್ರಕಥೆಗೆ ಆದೇಶ್ವರ್ ಸಂಭಾಷಣೆ ಬರೆದಿದ್ದಾರೆ.

ರೋಣ ಚಿತ್ರ ನವೆಂಬರ್ 7ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ರೋಣ

Be the first to comment

Leave a Reply

Your email address will not be published. Required fields are marked *

Translate »
error: Content is protected !!