ರೋಣ

ರೋಣ ಚಿತ್ರದ ಟೀಸರ್ ಬಿಡುಗಡೆ

ಸತೀಶ್ ಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ ರೋಣದ ಟೀಸರ್ ಬಿಡುಗಡೆ ಆಗಿದೆ. ರೋಣ ಚಿತ್ರದ ಟೀಸರ್ ನಲ್ಲಿ ಹಳ್ಳಿ ಸೊಗಡು ಕಂಡುಬಂದಿದೆ. ಜೊತೆಗೆ ಚಿತ್ರದಲ್ಲಿ ಧಾರ್ಮಿಕ ರಾಜಕೀಯ ವಿಚಾರಗಳು ಇರುವಂತೆ ಕಂಡಿದೆ.

ಚಿತ್ರದಲ್ಲಿ ನಾಯಕ ನಟನಾಗಿ ಹೊಸ ಪ್ರತಿಭೆ ರಘು ರಾಜಾನಂದ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಹಿನ್ನೆಲೆಯ ಈ ನಾಯಕ ನಟನಿಗೆ ನಾಯಕಿಯಾಗಿ ಪ್ರಕೃತಿ ಪ್ರಸಾದ್ ನಟಿಸಿದ್ದಾರೆ. ಶರತ್ ರೋಹಿತಾಶ್ವ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಾಲೂರು ವಿಜಯ್, ಚಿಲ್ಲರ್ ಮಂಜು, ಬಲ ರಾಜವಾಡಿ, ಸಂಗೀತ ಅನಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರೋಣ

ಚಿತ್ರದಲ್ಲಿ ಬಹುತೇಕ ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ದ ಆಗಿದ್ದು, ಟೀಸರ್ ಮೂಲಕ ಚಿತ್ರತಂಡ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ.

ಬಿಕೆಆರ್ ಪ್ರೊಡಕ್ಷನ್ ಆಂಡ್ ಟೀಮ್ ನಿರ್ಮಾಣದಲ್ಲಿ ಚಿತ್ರ ಮಾಡಿ ಬರುತ್ತಿದೆ. ಅರುಣ್ ಕುಮಾರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಗಗನ್ ಬದೇರಿಯಾ ಸಂಗೀತ ಸಂಯೋಜನೆ ಇದೆ. ವಿ ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಕಿನ್ನಾಳ ರಾಜ್ ಅವರು ಸಾಹಿತ್ಯ ರಚನೆ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!