ಸಿಎಂ ಮೆಚ್ಚಿದ ‘ರೋಣ’ ನ.7ಕ್ಕೆ‌ ಬಿಡುಗಡೆ

ಯುವ ನಿರ್ದೇಶಕ ಸತೀಶ್ ಕುಮಾರ್ ಅವರ ‘ರೋಣ’ ಚಿತ್ರ ನ.7ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

‘ರೋಣ’ ಚಿತ್ರದ ಟ್ರೇಲರ್‌ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ಹಳ್ಳಿ ಸೊಗಡಿನ ಕಥೆಯಾಗಿದ್ದು, ಸಂಬಂಧಗಳು, ಧಾರ್ಮಿಕ, ರಾಜಕೀಯ, ವೈಜ್ಞಾನಿಕ ವಿಚಾರಗಳನ್ನು ಒಳಗೊಂಡಿದೆ.

ಚಿತ್ರವನ್ನು ಬಿ ಆರ್ ಕೆ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಲಾಗಿದೆ. ಅಪ್ಪ-ಮಗನ ಕಥೆಯ ಎಳೆ ಹೊಂದಿರುವ ಈ ಚಿತ್ರದಲ್ಲಿ ರಘು ರಾಜಾನಂದ  ನಾಯಕನಟನಾಗಿದ್ದಾರೆ. ಪ್ರಕೃತಿ ಪ್ರಸಾದ್ ಚಿತ್ರದ ನಾಯಕಿ. ಶರತ್ ಲೋಹಿತಾಶ್ವ ನಾಯಕನ ತಂದೆಯ ಪಾತ್ರ ಮಾಡಿದ್ದಾರೆ. ಮಾಲೂರು ವಿಜಯ್ , ಚಿಲ್ಲರ್ ಮಂಜು, ಬಲರಾಜವಾಡಿ, ಸಂಗೀತ ಅನಿಲ್  ಇತರರು ನಟಿಸಿದ್ದಾರೆ.

ಅಪ್ಪ-ಮಗನ ಕಥೆಯ ಎಳೆ ಹೊಂದಿರುವ  ಚಿತ್ರದಲ್ಲಿ ಮನರಂಜನೆಯ ಎಲ್ಲಾಅಂಶಗಳು ಇವೆ. ಸಿನಿಮಾವನ್ನು 65 ದಿನಗಳ ಕಾಲ ಹೊಸಕೋಟೆ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚಿತ್ರಕ್ಕೆ ಅರುಣ್ ಕುಮಾರ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಗಗನ್ ಬಧೇರಿಯ ಸಂಗೀತ ಸಂಯೋಜನೆ, ವಿ ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಕಿನ್ನಾಳ ರಾಜ್ ಸಾಹಿತ್ಯ ಇದೆ. ರಮೇಶ್ ಅವರ ಕಥೆ ಹಾಗೂ ಚಿತ್ರಕಥೆಗೆ ಆದೇಶ್ವರ್ ಸಂಭಾಷಣೆ ಬರೆದಿದ್ದಾರೆ.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ಪ್ರಭಾಕರ್ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

—–

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!