‘ರೋಮಿಯೋ ಜೂಲಿಯಟ್’ಚಿತ್ರದ ಮುಹೂರ್ತ
ಭರತ್ ಎಂಬ ಯುವ ಪ್ರತಿಭೆ ನಿರ್ಮಾಣ ಮಾಡುವುದರೊಂದಿಗೆ ರೋಮಿಯೋ ಜ್ಯೂಲಿಯೆಟ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದು ಮೊನ್ನೆ ಈ ಚಿತ್ರದ ಮುಹೂರ್ತ ಸಮಾರಂಭವು ರಾಜಾಜಿನಗರದ ಆಂಜನೇಯ ದೇಗುಲದಲ್ಲಿ ನೆರವೇರಿತು.ಭರತ್ ಅವರು ಚಿತ್ರರಂಗದ ಹಲವು ಮಜಲುಗಳಲ್ಲಿ ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ್ದು, ತೆಲುಗಿನಲ್ಲಿ 35 ಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಆಂಧ್ರದ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು ಪಡೆದಿದ್ದು , ಈಗ ತಮ್ಮ ಪುತ್ರ ಧನುಷ್ ರನ್ನು ರೋಮಿಯೋ ಜ್ಯೂಲಿಯೆಟ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ನಿರ್ಮಾಪಕ ಭಾಮ ಹರೀಶ್ ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.ಭರತ್ ಮಾತನಾಡಿ, 1978ರಲ್ಲಿ ನಾನು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟೆ , ನನಗೆ ಡಾ.ರಾಜ್‍ಕುಮಾರ್ ಅವರ ಚಿತ್ರಗಳೆಂದರೆ ತುಂಬಾ ಪ್ರೀತಿ, ಅವರ ಸ್ಫೂರ್ತಿಯಿಂದಲೇ ಈಗ ಕನ್ನಡ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದು, ಈ ಚಿತ್ರವನ್ನು ತೆಲುಗು, ಹಿಂದಿ ಭಾಷೆಗಳಲ್ಲೂ ನಿರ್ಮಿಸುತ್ತಿದ್ದೇನೆ, ಷೇಕ್ಸ್‍ಪಿಯರ್ ರೋಮಿಯೋಜೂಲಿಯೆಟ್ ನಾಟಕಕ್ಕೆ ಹೊಸ ರೂಪ ಕೊಟ್ಟು ಈ ಸಿನಿಮಾ ಮಾಡಿದ್ದೇವೆ, ಈ ಚಿತ್ರದ ನಾಯಕನಾಗಿ ನನ್ನ ಮಗ ಧನುಷ್ ನಟಿಸುತ್ತಿದ್ದು, ಚಿತ್ರವನ್ನು ಮುಂಬೈ, ಹೈದರಾಬಾದ್, ಚಿಕ್ಕಮಗಳೂರಿ, ಮಡಿಕೇರಿಯಲ್ಲಿ ಚಿತ್ರೀಕರಣ ಮಾಡಲಿದ್ದೇವೆ ಎಂದರು.ಬೆಂಗಾಳಿ ಮೂಲದ ಸ್ವಾತಿ ಮಂಡಲ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡಿದ್ದಾರೆ. ನನ್ನ ಮಗ ಧನುಷ್ ನಾಯಕನಾಗಿ ನಟಿಸುತ್ತಿದ್ದಾನೆ. ಉಳಿದ ಪಾತ್ರಗಳಿಗೆ ಹೊಸ ಪತ್ರಿಭೆಗಳನ್ನೇ ಹಾಕಿಕೊಂಡಿದ್ದೇವೆ. ನಿರ್ದೇಶಕ ವಿಕ್ಟರಿ ವಾಸು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು. ಕನ್ನಡ ಚಿತ್ರರಂಗದ ಮೇಲಿರುವ ವ್ಯಾಮೋಹದಿಂದ ಭರತ್ ಅವರು ಒಂದು ಚಿತ್ರವನ್ನು ನಿರ್ಮಿಸಬೇಕೆಂದು ತೀರ್ಮಾನಿಸಿ ನನ್ನ ಬಳಿ ಬಂದರು, ಅವರ ಪ್ರಯತ್ನಕ್ಕೆ ನಮ್ಮಿಂದಾಗುವ ಸಹಕಾರ, ಬೆಂಬಲವನ್ನು ನೀಡಿದ್ದೇವೆ ಎಂದವರು ಹಿರಿಯ ನಿರ್ಮಾಪಕ ಭಾ.ಮಾ. ಹರೀಶ್.
ಶೇಕ್ಸ್‍ಪಿಯರ್ ಅವರ ರೋಮಿಯೋಜ್ಯೂಲಿಯಟ್ ಈಗಾಗಲೇ ಹಲವಾರು ಭಾಷೆಗಳಲ್ಲಿ ತಯಾರಾಗಿದ್ದು ಅವುಗಳಲ್ಲಿ ಅನೇಕ ಚಿತ್ರಗಳು ಗೆಲುವಿನ ಸವಿಯನ್ನು ಕಂಡಿದೆ, ಈಗ ಭರತ ಅವರು ಅದಕ್ಕೆ ಹೊಸ ರೂಪ ಕೊಟ್ಟಿದ್ದು ಪ್ರೇಕ್ಷಕರನ್ನು ರಂಜಿಸಿ ಗೆಲುವಿನ ಸವಿಯನ್ನು ಸವಿಯುವಂತಾಗಲಿ
Pingback: devsecops meaning