ನಾವು ಎಲ್ಲರನ್ನೂ ಗೌರವಿಸಬೇಕು. ಬಾಲಿವುಡ್ ಅನ್ನು ಗೌರವಿಸಿ : ಯಶ್

ಕರ್ನಾಟಕದ ಜನರು ಬೇರೆ ಇಂಡಸ್ಟ್ರಿ ಬಗ್ಗೆ ಕೀಳಾಗಿ ಮಾತನಾಡಬಾರದು. ಎಲ್ಲರೂ ನಮ್ಮನ್ನು ಹಾಗೆ ನಡೆಸಿಕೊಂಡಾಗ ನಾವು ಕೂಡ ಆ ಸಮಸ್ಯೆಯನ್ನು ಎದುರಿಸಿದ್ದೆವು. ಆ ಗೌರವ ಪಡೆಯಲು ಶ್ರಮಿಸಿದ್ದೇವೆ. ಅದು ಸಿಕ್ಕ ನಂತರ ನಾವು ಯಾರನ್ನೂ ಕೆಟ್ಟದಾಗಿ ನಡೆಸಿಕೊಳ್ಳಬಾರದು.

ನಾವು ಎಲ್ಲರನ್ನೂ ಗೌರವಿಸಬೇಕು. ಬಾಲಿವುಡ್ ಅನ್ನು ಗೌರವಿಸಿ. ಈ ಉತ್ತರ ಮತ್ತು ದಕ್ಷಿಣ ಎಂಬುದನ್ನು ಮರೆತುಬಿಡಿ’ ಎಂದು ಕೋರಿದ್ದಾರೆ ಯಶ್.

ಫಿಲ್ಮ್ ಕಂಪ್ಯಾನಿಯನ್​ ಗೆ ನೀಡಿದ ಸಂದರ್ಶನ ವೊಂದರಲ್ಲಿ ಬಾಲಿವುಡ್ vs​ ದಕ್ಷಿಣ ಸಿನಿಮಾ ಇಂಡಸ್ಟ್ರಿ ಹಾಗು ಹಲವು ವಿಚಾರಗಳ ಬಗ್ಗೆ ಮಾತನಾಡಿದರು.

ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು, ‘ನಾವು ಉತ್ತಮ ಸಿನಿಮಾಗಳನ್ನು ಮಾಡಬೇಕು ಮತ್ತು ಚಿತ್ರಮಂದಿರಗಳನ್ನು ನಿರ್ಮಿಸಬೇಕು. ಮಾಡಲು ತುಂಬಾ ಕೆಲಸಗಳಿವೆ. ನಮ್ಮ ನಡುವೆ ಜಗಳವಾಡುವುದನ್ನು ನಾವು ನಿಲ್ಲಿಸಬೇಕಿದೆ. ಹೊರಗಿನ ಪ್ರಪಂಚದೊಂದಿಗೆ ಸ್ಪರ್ಧಿಸಬೇಕಿದೆ’ ಎಂದಿದ್ದಾರೆ.

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!