ರಿಷಿ ಹಾಗೂ ಪ್ರಕಾಶ್ ಬೆಳವಾಡಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಹೊಸ ಚಿತ್ರಕ್ಕೆ ‘ಅನಂತ ಪದ್ಮನಾಭ’ ಎಂದು ಟೈಟಲ್ ಇಡಲಾಗಿದೆ.
‘ತೀರ್ಥರೂಪ ತಂದೆಯವರಿಗೆ’, ಅಧ್ಯಕ್ಷ’, ‘ವಿಕ್ಟರಿ’, ‘ರನ್ನ’, ‘ಪೊಗರು’, ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾಗಳಿಗೆ ಸಂಭಾಷಣೆ ಬರೆದ ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಚೊಚ್ಚಲ ನಿರ್ದೇಶನದ ಈ ಚಿತ್ರ ಕಾಮಿಡಿ ಡ್ರಾಮಾ ಸಿನಿಮಾ ಟ್ರಾವೆಲ್ ಕಥೆಯನ್ನು ಒಳಗೊಂಡಿದೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಬೆಂಗಳೂರು, ಸಾಗರ, ತೀರ್ಥಹಳ್ಳಿ ಭಾಗದಲ್ಲಿ ಶೂಟಿಂಗ್ ನಡೆದಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ.
ಸಿನಿಮಾದ ಟೈಟಲ್ ಪೋಸ್ಟರ್ನಲ್ಲಿ ಕಾರಿನ ಎದುರು ರಿಷಿ ಹಾಗೂ ಪ್ರಕಾಶ್ ಕುಳಿತಿದ್ದಾರೆ. ಕಾರಿನ ಮೇಲೆ ಬ್ಯಾಗ್ಗಳು ಇವೆ. ಇದನ್ನು ನೋಡಿದರೆ ಇದು ಟ್ರಾವೆಲ್ ಕಥೆ ಹೊಂದಿದೆ ಎಂದು ಪ್ರೇಕ್ಷಕರು ಊಹಿಸುತ್ತಿದ್ದಾರೆ. ರಿಷಿ ಹಾಗೂ ಪ್ರಕಾಶ್ ಬೆಳವಾಡಿ ಕಾಂಬಿನೇಷನ್ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.
ಅನಂತ ಪದ್ಮನಾಭ’ ಸಿನಿಮಾವನ್ನು ಅಮ್ರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದಾರೆ. ಅಶ್ವಿನ್ ಪಿ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ. ಶೀಘ್ರವೇ ಚಿತ್ರತಂಡ ರಿಲೀಸ್ ದಿನಾಂಕ ರಿವೀಲ್ ಮಾಡಲಿದೆ.
—-





Be the first to comment