ರಿಷಬ್ ಶೆಟ್ಟಿಯ ಕಾಲ ಮೇಲೆ ದೈವ ನರ್ತಕ ಕೋಲದ ವೇಳೆ ಮಲಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕ ದೈವಾರಾಧಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬಳಿಕ ನಟ ರಿಷಬ್ ಶೆಟ್ಟಿ ತಂಡದೊಂದಿಗೆ ಮಂಗಳೂರಿಗೆ ತೆರಳಿ ಹರಕೆ ಕೋಲದಲ್ಲಿ ಭಾಗವಹಿಸಿದ್ದರು. ಬಾರೆಬೈಲ್ನ ವಾರಾಹಿ ಪಂಜುರ್ಲಿ, ಅರಸು ಜಾರಂದಾಯ ಹಾಗೂ ಬಂಟ ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಘಟನೆ ಚರ್ಚೆಗೆ ಕಾರಣವಾಗಿದೆ.
ಹರಕೆಗೆ ಕಟ್ಟುಪಾಡುಗಳಿವೆ. ಈಗ ನಡೆಯುತ್ತಿರುವುದು ನಿಯಮಕ್ಕೆ ವಿರುದ್ಧ. ರಿಷಬ್ ಶೆಟ್ಟಿಗೆ ಡೇಟ್ ಇದೆ ಎಂದು ಕದ್ರಿ ಮಂಜುನಾಥನ ನೇಮವನ್ನು ಬದಲಾಯಿಸಿಕೊಂಡಿದ್ದಾರೆ. ಇದು ದೈವರಾಧನೆಗೆ ಗೌರವ ಕೊಡದ ಕೃತ್ಯ,” ಎಂದು ದೈವರಾಧಕ ತಮ್ಮಣ್ಣ ಶೆಟ್ಟಿ ಆರೋಪಿಸಿದ್ದಾರೆ.
‘ನರ್ತಕ ಹಾಕಿದ್ದ ವೇಷಭೂಷಣ ದೈವ ಸಂಪ್ರದಾಯಕ್ಕೆ ಸೂಟ್ ಆಗುವುದಿಲ್ಲ. ದೈವ ಕಡ್ತಳೆಯನ್ನು ತಲೆಗೆ ಹೊಡೆಯುವುದಿಲ್ಲ. ಇದು ಜನ ಮೆಚ್ಚಿಸಲು ಮಾಡುತ್ತಿರುವ ನಾಟಕ. ದೈವರಾಧನೆಯನ್ನು ವ್ಯಾಪಾರ ಮಾಡುತ್ತಿರುವುದರಿಂದ ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇಂಥ ತಪ್ಪುಗಳು ದೊಡ್ಡ ಪರಿಣಾಮ ತರುತ್ತವೆ ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ತುಳುನಾಡಿನ ದೈವಗಳು ಈ ರೀತಿಯಾಗಿ ವರ್ತಿಸುವುದಿಲ್ಲ. ರಿಷಬ್ ಕಾಲ ಕಡೆ ಮಲಗಿದ್ದು ದೈವವಲ್ಲ. ಕೇವಲ ನರ್ತಕ,” ಎಂದು ನೆಟ್ಟಿಗರು ಟೀಕಿಸಿದ್ದಾರೆ.
—–





Be the first to comment