4-5 ಸಲ ನಾನು ಹೋಗಿ ಬಿಡಬೇಕಾಗಿತ್ತು. ಆದರೆ ದೈವ ನನ್ನನ್ನು ಬದುಕಿಸಿದೆ ಎಂದು ಕಾಂತಾರ ಚಾಪ್ಟರ್ 1ರ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ.
ಬಹು ನಿರೀಕ್ಷಿತ ಕಾಂತಾರಾ ಚಾಪ್ಟರ್ 1 ಚಿತ್ರದ ಟ್ರೈಲರ್ ಬಿಡುಗಡೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು -ನಾಲ್ಕು ಬಾರಿ ನಾನು ಸತ್ತೇ ಹೋಗಬೇಕಿತ್ತು. ಅಷ್ಟೊಂದು ತೊಂದರೆ ಆಗಿದೆ. ಮೂರು ತಿಂಗಳಿನಿಂದ ನಾವು ಸರಿಯಾಗಿ ನಿದ್ದೆ ಮಾಡಿಲ್ಲ. ಚಿತ್ರತಂಡದವರು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ ಎಂದು ಹೇಳಿದರು.
ಕಾಂತರಾ ಸಿನಿಮಾದಲ್ಲಿ ಮುಳುಗಿ ಹೋದ ಕಾರಣ ಹೊರಗಡೆ ಏನು ಆಗುತ್ತಿದೆ ಎನ್ನುವುದು ನನ್ನ ಗಮನಕ್ಕೆ ಬರುತ್ತಿರಲಿಲ್ಲ. ಒಂದು ಕಥೆಯನ್ನು ಚೆನ್ನಾಗಿ ಕಾಣಿಸಬೇಕೆಂದು ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಹೊಂಬಾಳೆ ಚಿತ್ರ ನಿರ್ಮಾಪಕರು ಬಜೆಟ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮ್ಮದು ದಿನಗೂಲಿ ಎನ್ನುವಂತೆ ಲೆಕ್ಕ ಹಾಕಿದ್ದಾರೆ. ನಾಲ್ಕೂವರೆ ವರ್ಷಗಳಿಂದ ಸಿನಿಮಾಗಾಗಿ ನಮಗೆ ಊಟ ಹಾಕಿದ್ದಾರೆ ಎಂದು ಹೇಳಿದರು.
ಕಾಂತರಾ ಪ್ರಿಕ್ವೆಲ್ ಮಾಡಬೇಕಾದರೆ ನಾವು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇವೆ. ಪ್ರಗತಿ ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊತ್ತಿದ್ದರು. ಇಡೀ ಚಿತ್ರತಂಡ ಶ್ರಮವಹಿಸಿ ಕೆಲಸ ಮಾಡಿರುವ ಕಾರಣ ಪ್ರಾಜೆಕ್ಟ್ ಯಶಸ್ವಿಯಾಗಿ ಮುಗಿಸಿದ್ದೇವೆ ಎಂದು ಅವರು ಹೇಳಿದ್ದಾರೆ.






Be the first to comment