‘ಅಮಿತಾಬ್ ಚಿತ್ರ ರಿಮೇಕ್ ಮಾಡಿ ಡಾ. ರಾಜ್ ಸ್ಟಾರ್ ಆದರು’

ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ʻಅಮಿತಾಬ್‌ ಬಚ್ಚನ್‌ ಅವರ ಸಿನಿಮಾಗಳನ್ನು ರಿಮೇಕ್‌ ಮಾಡಿ ರಾಜ್‌ಕುಮಾರ್‌ ಅವರು ಫೇಮಸ್‌ ಆಗಿದ್ದಾರೆʼ ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

‘ರಜನಿಕಾಂತ್‌, ಚಿರಂಜೀವಿ, ಎನ್‌ಟಿ ರಾಮರಾಮ್‌ ಮತ್ತು ಕನ್ನಡದ ರಾಜ್‌ಕುಮಾರ್‌ ನಂತಹ ನಟರುಗಳು 70 ಮತ್ತು 80ರ ದಶಕದಲ್ಲಿ ಅಮಿತಾಬ್‌ ಬಚ್ಚನ್‌ ಅವರ ಸಿನಿಮಾಗಳನ್ನು ರಿಮೇಕ್‌ ಮಾಡಿ ಭಾರೀ ಜನಪ್ರಿಯತೆ ಗಳಿಸಿದರು’ ಎಂದು ವರ್ಮಾ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ  ವರ್ಮಾ, ‘ಮೊದಲೆಲ್ಲ  ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಅಮಿತಾಬ್‌ ಬಚ್ಚನ್‌ ಅವರ ಸಿನಿಮಾಗಳನ್ನು ರಿಮೇಕ್‌ ಮಾಡುತ್ತಿದ್ದರು. 90ರ ದಶಕದಲ್ಲಿ ಅಮಿತಾಬ್‌ ಬಚ್ಚನ್‌  ಸಿನಿಮಾಗಳಿಂದ ಐದು ವರ್ಷ ಬ್ರೇಕ್‌ ತೆಗೆದುಕೊಂಡಿದ್ದರು. ಆಗ ದಕ್ಷಿಣದ ಸಿನಿಮಾ ನಿರ್ದೇಶಕರು ಬಚ್ಚನ್‌ ಅವರ ಸ್ಟೈಲ್‌ನಲ್ಲಿ ಮಸಾಲಾ ಚಿತ್ರಗಳನ್ನು ಮಾಡುವುದನ್ನು  ನಿಲ್ಲಿಸಲಿಲ್ಲ. ಇದೇ ರೀತಿ ದಕ್ಷಿಣ ಸಿನಿ ತಾರೆಯರು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡರು. ಅದು ಇಂದಿಗೂ ಮುಂದುವರೆದಿದೆ’ ಎಂದು ಹೇಳಿಕೆ ಕೊಟ್ಟು ಡಾ. ರಾಜ್ ಅಭಿಮಾನಿಗಳ  ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇತ್ತೀಚೆಗೆ ವರ್ಮಾ ʻಕಮಲ್‌ ಹಾಸನ್‌ʼ ಅವರ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್‌ ಮಾಡಬೇಕು ಅಂತ ಬೆದರಿಕೆ ಹಾಕುವುದು ಹೊಸ ರೀತಿಯ ಗೂಂಡಾಗಿರಿʼ ಎಂದು ಟ್ವೀಟ್‌ ಮಾಡಿ ಬಳಿಕ ಅದನ್ನು ಡಿಲೀಟ್‌ ಮಾಡಿ ಸುದ್ದಿಯಾಗಿದ್ದರು.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!