ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳಾ ಲೈಂಗಿಕ ದೌರ್ಜನ್ಯದ ಕುರಿತಂತೆ ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿ ಬಹಿರಂಗ ಆಗಿದ್ದು, ಮಲಯಾಳಂ ಚಿತ್ರರಂಗದಲ್ಲಿ ಇರುವ ಹಲವು ಕೆಟ್ಟ ವಿಚಾರಗಳು ಬೆಳಕಿಗೆ ಬಂದಿವೆ.
ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು ಆರ್ಟಿಐ ಮೂಲಕ ವರದಿ ಬಹಿರಂಗಗೊಂಡಿದೆ. ವರದಿಯಲ್ಲಿ ಉಲ್ಲೇಖವಾಗಿರುವ ಅಂಶಗಳು ಚಿತ್ರೋದ್ಯಮದಲ್ಲಿ ಕೋಲಾಹಲ ಸೃಷ್ಟಿಸಿದೆ.
ಮಲಯಾಳಂ ಸಿನಿಮಾ ರಂಗ ಕೆಲ ಪುರುಷ ಹಿಡಿತದಲ್ಲಿದ್ದು, ಅವರು ಹೇಳಿದಂತೆ ಕೇಳದೇ ಇದ್ದರೆ ಯಾವ ನಟಿಯರಿಗೂ ಅವಕಾಶ ಸಿಗುವುದಿಲ್ಲ. ಮಹಿಳೆಯರು ಚಿತ್ರೋದ್ಯಮದಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕು
ಇಲ್ಲವಾದಲ್ಲಿ ಚಿತ್ರೋದ್ಯಮವನ್ನು ತೊರೆಯಬೇಕು ಎನ್ನುವ ಅಂಶಗಳನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಚಿತ್ರೋದ್ಯಮದಲ್ಲಿ ಮಾಫಿಯಾ ಎಂಟ್ರಿ ಕೊಟ್ಟಿದೆ. ಮಲಯಾಳಂ ಚಿತ್ರೋದ್ಯಮ ಕೆಲ ನಿರ್ಮಾಪಕ, ನಿರ್ದೇಶಕ ಹಾಗೂ ನಟರ ಹಿಡಿತದಲ್ಲಿರುವುದು ಕಂಡು ಬಂದಿದೆ. ಈ ಜನರು ಮಲಯಾಳಂ ಚಿತ್ರೋದ್ಯಮ ನಿಯಂತ್ರಿಸುತ್ತಿದ್ದಾರೆ. ಈ ಉದ್ಯಮವು ಅಪರಾಧಿಗಳ ಮತ್ತು ಸ್ತ್ರೀ ದ್ವೇಷಿಗಳಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನಿಯಮಗಳಿಗೆ ಒಪ್ಪುವ ಮಹಿಳೆಯರ ಗುಂಪು ಅಲ್ಲಿ ರಚನೆಯಾಗಿದೆ. ಅವರನ್ನು ಕೋಡ್ ಹೆಸರುಗಳಿಂದ ಉಲ್ಲೇಖಿಸಲಾಗುತ್ತದೆ. ಎಷ್ಟೋ ಮಹಿಳಯರು ಪಾತ್ರಗಳಿಗಾಗಿ ಈ ರೀತಿ ಗುಂಪಿಗೆ ಸೇರಿದ್ದಾರೆ ಎನ್ನುವ ಆತಂಕಕಾರಿ ಅಂಶ ವರದಿಯಲ್ಲಿದೆ.
ನಟಿಯೊಬ್ಬಳು ನಟನಿಂದ ದೌರ್ಜನ್ಯಕ್ಕೆ ಒಳಗಾಗಿ ಮರುದಿನ ಆಕೆ ಆತನೊಂದಿಗೆ ಪತ್ನಿಯಾಗಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆಘಾತದಲ್ಲಿದ್ದ ನಟಿಯು ಆ ದೃಶ್ಯವನ್ನು ಎದುರಿಸೋಕೆ ಆಗದೇ 17 ಟೇಕ್ ತೆಗೆದುಕೊಂಡಳು. ಅವನನ್ನು ಎದುರಿಸಲು ಆಗದೇ ದೃಶ್ಯ ಮುಗಿಸಲು ಹರಸಾಹಸ ಪಟ್ಟಳು. ಆ ದೃಶ್ಯದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವಂಥ ದೃಶ್ಯವಿತ್ತು. ನಿಜಕ್ಕೂ ಅದು ಭಯಾನಕ ಆಗಿತ್ತು ಎಂದು ಆ ನಟಿ ಹೇಳಿಕೊಂಡ ವಿಚಾರ ವರದಿಯಲ್ಲಿದೆ.
ಮಹಿಳೆಯರು ಚಿತ್ರೋದ್ಯಮಕ್ಕೆ ಹಣ ಮಾಡಲು ಬರುತ್ತಿದ್ದಾರೆ. ಅವರು ಎಲ್ಲದಕ್ಕೂ ರೆಡಿ ಆಗಿರುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಅದು ನಿಜವಲ್ಲ. ಕಲೆ ಮತ್ತು ನಟನೆಯ ಮೇಲಿನ ಆಸಕ್ತಿ ಕಾರಣದಿಂದಾಗಿ ಮಹಿಳೆಯರು ಸಿನಮಾ ರಂಗಕ್ಕೆ ಬರುತ್ತಿದ್ದಾರೆ. ಕೆಲವರು ಅವಕಾಶ ಪಡೆಯಲು ಅಡ್ಡದಾರಿಯನ್ನೂ ಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ.
__
Be the first to comment