”ನನ್ನ ಗಂಡ ಏನಾದರೂ ತಪ್ಪು ಮಾಡಿದ್ದರೆ, ದರ್ಶನ್ ವಾರ್ನಿಂಗ್ ಕೊಟ್ಟು ಕಳಿಹಿಸಬೇಕಿತ್ತು. ಅವರ ಜೀವಕ್ಕೆ ಯಾಕೆ ತೊಂದರೆ ಮಾಡಬೇಕಿತ್ತು? ಗಂಡನನ್ನು ಕಳೆದುಕೊಂಡು, ನನ್ನ ಮತ್ತು ನನ್ನ ಮಗುವಿನ ಮುಂದಿನ ಭವಿಷ್ಯವೇನು?” ಎಂದು ರೇಣುಕಾಸ್ವಾಮಿ ಪತ್ನಿ ಸಹನಾ ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾರೆ.
”ನನ್ನ ಪತಿ ಹತ್ಯೆಯಾಗಿದೆ. ನಾನು ಗರ್ಭಿಣಿ ಇದ್ದೇನೆ. ನಾವಿಬ್ಬರು ಮದುವೆಯಾಗಿ ಒಂದು ವರ್ಷ ಆಗಿತ್ತು. ನನ್ನ ಗಂಡನಿಗೆ ಹೀಗೆ ಆಗಬಾರದಿತ್ತು. ನಾನು ತಾಯಿ ಆಗುತ್ತಿದ್ದೇನೆ. ಗಂಡನಿಲ್ಲದೆ ಹೇಗಿರಲಿ? ನನ್ನ ಮತ್ತು ಮಗುವಿನ ಭವಿಷ್ಯವೇನು? ನನಗೆ ನ್ಯಾಯ ಕೊಡಿಸಬೇಕು ಎಂದು ಸಹನಾ ಮನವಿ ಮಾಡಿದ್ದಾರೆ.
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕಾಮಾಕ್ಷಿಪಾಳ್ಯದ ಗೋಡೌನ್ನ ಶೇಡ್ನಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಬಳಿಕ ಮೃತದೇಹವನ್ನು ಮೋರಿಗೆ ಬಿಸಾಡಲಾಗಿತ್ತು. ಇದೀಗ ಹತ್ಯೆ ಪ್ರಕರಣದಲ್ಲಿ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿ 13 ಜನರನ್ನು ಬಂಧಿಸಲಾಗಿದೆ.
ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳಿಸಿದ್ದ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ದರ್ಶನ್ ತಮ್ಮ ಆಪ್ತರ ಮೂಲಕ ಅಪಹರಿಸಿ ಹತ್ಯೆ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
—-

Be the first to comment