ತೆರೆಗೆ ಬರಲು ಸಿದ್ಧವಾದ ಯೋಗಿ ನಟನೆಯ ‘ ಲಂಕೆ ‘

‘ಲಂಕೆ’ ಸಿನಿಮಾದ ಮೂಲಕ ಲೂಸ್ ಮಾದ ಯೋಗಿ ವರಮಹಾಲಕ್ಷ್ಮಿ ಹಬ್ಬದಂದು ಬೆಳ್ಳಿತೆರೆಯ ಮೇಲೆ ಬರಲಿದ್ದಾರೆ. ಈ ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

‘ಲಂಕೆ’ ಚಿತ್ರದ ಮೋಷನ್‌ ಪೋಸ್ಟರ್‌ ಈ ಹಿಂದೆಯೇ ರಿಲೀಸ್‌ ಆಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಯೋಗಿ ಹೀರೋ ಆಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫಿಸಿಕಲಿ ಸ್ಟ್ರಾಂಗ್‌ ಆಗಿ ಕಾಣಿಸಬೇಕು ಎನ್ನುವ ಕಾರಣಕ್ಕೆ ಯೋಗಿ ಬಾಡಿಬಿಲ್ಡ್‌ ಮಾಡಿದ್ದು ಗಮನ ಸೆಳೆದಿದ್ದಾರೆ.

‘ ಲಂಕೆ’ ಚಿತ್ರದಲ್ಲಿ ಲೈಂಗಿಕ ಕೆಲಸಗಾರರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಹೀರೊ ಹೋರಾಡುವ ಕಥೆ ಇದೆ.
” ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವ ಜನಾಂಗದ ವಿರುದ್ಧ ಹೀರೋ ಸೇಡು ತೀರಿಸಿಕೊಳ್ಳುತ್ತಾನೆ. ಇದು ಆ್ಯಕ್ಷನ್‌ ಚಿತ್ರ ಆಗಿದೆ. ಮಾಸ್‌ ಎಂಟರ್‌ಟೇನ್‌ಮೆಂಟ್‌ ಆಗಿರುವ ಚಿತ್ರದಲ್ಲಿ ಮೆಸೇಜ್‌ ಕೂಡ ನೀಡಲಾಗಿದೆ. ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದೇವೆ” ಎನ್ನುತ್ತಾರೆ ‘ಲಂಕೆ’ ಸಿನಿಮಾ ನಿರ್ದೇಶನ ಮಾಡುತ್ತಿರುವ ರಾಮ್ ಪ್ರಸಾದ್ ಎಂ. ಡಿ.

ಚಿತ್ರವನ್ನು ಬೆಂಗಳೂರು ಮತ್ತು ಸಂಗಮ ಫಾರೆಸ್ಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಇತ್ತೀಚೆಗೆ ನಿಧನ ಹೊಂದಿದ ಸಂಚಾರಿ ವಿಜಯ್‌ ಅವರೂ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.”ಚಿತ್ರವನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ. ಯೋಗಿ ಚೆನ್ನಾಗಿ ನಟಿಸಿದ್ದಾರೆ. ಇದುವರೆಗೆ ನೋಡದ ಯೋಗಿಯವರನ್ನು ಸಿನಿಮಾದಲ್ಲಿ ನೋಡಬಹುದು. ಯೋಗಿ ಅವರ ಸಿನಿ ಬದುಕಿನಲ್ಲಿ’ಲಂಕೆ’ ಚಿತ್ರ ಒಂದು ತಿರುವು ನೀಡುತ್ತದೆ ಎನ್ನುವ ನಂಬಿಕೆ ಇದೆ” ಎನ್ನುತ್ತಾರೆ ನಿರ್ದೇಶಕ ರಾಮ್‌ಪ್ರಸಾದ್‌.

ಚಿತ್ರದಲ್ಲಿ ಯೋಗೇಶ್ ಜೊತೆಗೆ ಕಾವ್ಯ ಶೆಟ್ಟಿ, ಕೃಷಿ ತಾಪಂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ನೀಡಿದ್ದಾರೆ. ಪಟೇಲ್ ಚಿತ್ರವನ್ನು ಶ್ರೀನಿವಾಸ್ ನಾಗವಾರ, ಶ್ರೀಮತಿ ಸುರೇಖಾ ರಾಮ್ ಪ್ರಸಾದ್ ನಿರ್ಮಾಣ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!