‘ಕಾಂತಾರ’ ಸಿನೆಮಾದ ‘ವರಾಹರೂಪಂ’ ಹಾಡಿನ ಕೃತಿಚೌರ್ಯ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ ಕೆಲ ವಿನಾಯಿತಿ ನೀಡಿದ್ದು, ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ನಿರಾಳರಾಗಿದ್ದಾರೆ.
‘ವರಾಹರೂಪಂ’ ಹಾಡನ್ನು ಪ್ರದರ್ಶಿಸಬಾರದು ಎಂದು ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂ ಕೋರ್ಟ್ ಸಡಿಲಿಸಿದೆ. ಜೊತೆಗೆ ಹಾಡಿನ ಮೇಲೆ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ತನಿಖೆಗೆ ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿಯವರು ಫೆಬ್ರವರಿ 12 ಮತ್ತು 13ರಂದು ಹಾಜರಾಗುವ ವೇಳೆ ಅವರನ್ನು ಬಂಧಿಸಬಾರದೆಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದೆ.
ಕೆಲವು ಷರತ್ತುಗಳನ್ನು ಹಾಕುವ ಮೂಲಕ ‘ಕಾಂತಾರ’ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕೇರಳ ಹೈಕೋರ್ಟ್ ಮೊನ್ನೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
‘ವರಾಹ ರೂಪಂ’ ಹಾಡಿಗೆ ಸಂಬಂಧಿಸಿದಂತೆ ಕೇರಳದ ಹೈಕೋರ್ಟ್ ನ್ಯಾಯಮೂರ್ತಿ ಎ.ಬದ್ರುದ್ದೀನ್ ಅವರು ‘ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್ ನಿಂದ ಆದೇಶ ಬರೋವರೆಗೆ ವರಾಹ ರೂಪಂ ಹಾಡನ್ನು ಬಳಕೆ ಮಾಡುವಂತಿಲ್ಲ’ ಎನ್ನುವ ಷರತ್ತು ಹಾಕಿದ್ದರು.
Be the first to comment