ದರ್ಶನ್​ಗೆ ರಿಲೀಫ್‌

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್​  ಹಾಗೂ ಇತರ ಆರೋಪಿಗಳಿಗೆ ಸುಪ್ರೀಂಕೋರ್ಟ್‌ ಗುರುವಾರ ಅರ್ಜಿ ವಿಚಾರಣೆಯನ್ನು ಮುಂದೂಡಿ  ಸದ್ಯದ ಮಟ್ಟಿಗೆ ರಿಲೀಫ್‌ ಸಿಕ್ಕಿದೆ.

ದರ್ಶನ್ ಪರ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು.  ಕಪಿಲ್‌ ಸಿಬಲ್ ಬೇರೊಂದು ಕೇಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಆರೋಪಿಗಳ ಪರ ವಕೀಲ ಸಿದ್ಧಾರ್ಥ್ ದವೆ ವಾದ ಮಂಡಿಸಿದ್ದಾರೆ. ಒಂದು ದಿನದ ಮಟ್ಟಿಗೆ ಕಾಲಾವಕಾಶ ಕೋರಿ  ಮನವಿ ಮಾಡಿಕೊಂಡಿರು. ಅದರಂತೆ ಸುಪ್ರೀಂಕೋರ್ಟ್‌ ಗುರುವಾರಕ್ಕೆ ವಿಚಾರಣೆ ಮುಂದೂಡಿದೆ.

ಕಳೆದ ವಾರ ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌,  ಹೈಕೋರ್ಟ್​ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ನಮಗೆ ಪೊಲೀಸರು ನೀಡಿರುವ ಸಾಕ್ಷ್ಯಗಳು ತೃಪ್ತಿ ತಂದಿವೆ ಎಂದು ಸುಪ್ರೀಂಕೋರ್ಟ್‌ ಹೇಳಿತ್ತು. ಹೀಗಾಗಿ ಕೊಲೆ ಆರೋಪಿ ದಾಸ ಅಂಡ್‌ ಟೀಂಗೆ ಢವಢವ ಶುರುವಾಗಿತ್ತು. ಸದ್ಯ ಕೋರ್ಟ್‌ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದು, ದಾಸನಿಗೆ ಒಂದು ದಿನದ ಮಟ್ಟಿಗೆ ರಿಲೀಫ್‌ ಸಿಕ್ಕಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್​ಗೆ ಹಾಗೂ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಕರ್ನಾಟಕ ಪೊಲೀಸ್ ಸುಪ್ರೀಂ ಮೆಟ್ಟಿಲೇರಿದ್ದರು. ಸದ್ಯ ದರ್ಶನ್​   ದಿ ಡೆವಿಲ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 30ರವರೆಗೆ ಥೈಲ್ಯಾಂಡ್​ನಲ್ಲಿ ಶೂಟಿಂಗ್​ ಅವಕಾಶ ಸಿಕ್ಕಿದ್ದು ,ಶೂಟಿಂಗ್​  ಸಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!