ಪುರುಷರ ಬಗ್ಗೆ ರೆಜಿನಾ ವಿವಾದಾತ್ಮಕ ಜೋಕ್!

ಪುರುಷರ ಲೈಂಗಿಕ ಸಾಮರ್ಥ್ಯ ಮ್ಯಾಗಿ ನೂಡಲ್ಸ್ ಥರಾ ಎರಡೇ ನಿಮಿಷ ಎಂದು ಜೋಕ್ ಮಾಡಿರುವ ನಟಿ ರೆಜಿನಾ ಪುರುಷ ನೆಟಿಜನ್ಸ್ ಗಳಿಂದ ಟ್ರೋಲ್ ಗೊಳಗಾಗಿದ್ದಾರೆ.

ಡಾಕಿನಿ ಸಿನಿಮಾ ಖ್ಯಾತಿಯ ನಟಿ ರೆಜಿನಾ ಈ ಸಿನಿಮಾದ ಪ್ರಚಾರದ ವೇಳೆ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. ಪಡ್ಡೆ ಹುಡುಗರು ರೆಜಿನಾರನ್ನು ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.

ಈ ರೀತಿಯ ಹೇಳಿಕೆ ನೀಡಿರುವ ರೆಜಿನಾ ಅವರನ್ನು ಕೆಲವರು ಟ್ರೋಲ್​ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಟಿಯಾಗಿ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ನಿಮಗೆ ಹೇಗೆ ಗೊತ್ತು? ನೀವು ಇನ್ನೂ ಮದುವೆನೇ ಆಗಿಲ್ವಲ್ಲಾ? ಎಂದು ಕಾಲೆಳೆಯುತ್ತಿದ್ದಾರೆ.

ರಜಿನಾ ಹಾಗೂ ನಿವೇತಾ ಥಾಮಸ್​ ಅವರು ‘ಸಾಕಿನಿ ಧಾಕಿನಿ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸುಧೀರ್​ ವರ್ಮಾ ಆಯಕ್ಷನ್​ ಕಟ್ ಹೇಳಿದ್ದಾರೆ. ಈ ಇಬ್ಬರೂ ನಟಿಯರು ಶಾಕಿನಿ ಡಾಕಿನಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು.

ರೆಜಿನಾ ಈ ಮೊದಲು ಕನ್ನಡದ ಸೂರ್ಯಕಾಂತಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಇಂತಹದ್ದೊಂದು ವಿವಾದದ ಮೂಲಕ ಭಾರೀ ಸುದ್ದಿ ಮಾಡಿದ್ದಾರೆ.
__

 

Be the first to comment

Leave a Reply

Your email address will not be published. Required fields are marked *

Translate »
error: Content is protected !!