ಟಿಕೆಟ್ ಮಾರಾಟದಲ್ಲಿ ಇತಿಹಾಸ ಬರೆದ ‘ಧುರಂಧರ್’

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾದ ಒಟ್ಟು 4 ಕೋಟಿ ಟಿಕೆಟ್‌ಗಳು ಮಾರಾಟವಾಗಿದ್ದು, ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಬಾಕ್ಸ್ ಆಫೀಸ್ ಇತಿಹಾಸವನ್ನು ನಿರ್ಮಿಸಿದೆ.

ಈ ಮೂಲಕ ‘ಧುರಂಧರ್’ ಸಿನಿಮಾ ಆಮಿರ್ ಖಾನ್, ಶಾರುಖ್ ಖಾನ್  ಸೂಪರ್ ಹಿಟ್ ಸಿನಿಮಾಗಳನ್ನು ಹಿಂದಿಕ್ಕಿದೆ. ಶಾರುಖ್ ಖಾನ್ ನಟನೆಯ ‘ಕುಚ್ ಕುಚ್ ಹೋತಾ ಹೈ’ ಸಿನಿಮಾದ 3.5 ಕೋಟಿ ಟಿಕೆಟ್‌  ಮಾರಾಟ ಆಗಿತ್ತು. ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾದ 3.7 ಕೋಟಿ ಟಿಕೆಟ್‌,  ‘ಪಿಕೆ’ ಸಿನಿಮಾ 3.5 ಕೋಟಿ ಟಿಕೆಟ್ ಮಾರಾಟ ಆಗಿತ್ತು. ಈ ಎಲ್ಲ ದಾಖಲೆಗಳನ್ನು ‘ಧುರಂಧರ್’ ಸಿನಿಮಾ ಮುರಿದು ಹಾಕಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 4 ಕೋಟಿ ಟಿಕೆಟ್‌ಗಿಂತ ಹೆಚ್ಚು ಮಾರಾಟ ಮಾಡಿದ ಸಿನಿಮಾಗಳು 19 ಮಾತ್ರ. ‘ಬಾಹುಬಲಿ 2’, ‘ಶೋಲೆ’, ‘ಮೊಘಲ್ ಎ ಆಜಂ’ ಹಾಗೂ ‘ಮದರ್ ಇಂಡಿಯಾ’ ಸಿನಿಮಾಗಳು   ತಲಾ 10 ಕೋಟಿ ಟಿಕೆಟ್ ಮಾರಾಟ ಆಗಿದ್ದವು. ಆ  ದಾಖಲೆಗಳನ್ನು ಮುರಿಯಲು ‘ಧುರಂಧರ್’ ಸಿನಿಮಾಗೆ ಇನ್ನೂ ಸಾಧ್ಯವಾಗಿಲ್ಲ.

ಕಳೆದ ವರ್ಷದ ಡಿಸೆಂಬರ್ 5ರಂದು ‘ಧುರಂಧರ್’ ಸಿನಿಮಾ ತೆರೆಗೆ ಬಂದಿತ್ತು. ಆದಿತ್ಯ ಧಾರ್ ನಿರ್ದೇಶನದ  ಸಿನಿಮಾ ಮೊದಲ ದಿನವೇ 30 ಕೋಟಿ ರೂಪಾಯಿ ಕಲೆಕ್ಷನ್  ಪಡೆದಿತ್ತು. ‘ಧುರಂಧರ್’ ಸಿನಿಮಾದ  ಯಶಸ್ಸಿನ ಹಿನ್ನೆಲೆಯಲ್ಲಿ  ಅದರ ಸೀಕ್ವೆಲ್  ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!