ದಾಖಲೆ ಮೊತ್ತಕ್ಕೆ ಜೇಮ್ಸ್ ಸ್ಯಾಟಲೈಟ್ ರೈಟ್ಸ್ ಸೇಲ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರದ ಕನ್ನಡದ ಸ್ಯಾಟಲೈಟ್ ರೈಟ್ಸ್ ಭರ್ಜರಿ 13.80 ಕೋಟಿ ರೂ. ಗೆ ಮಾರಾಟವಾಗಿದೆ.

ಈ ಹಿಂದೆ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರದ ಸ್ಯಾಟಲೈಟ್ ರೈಟ್ಸ್ 6 ಕೋಟಿಗೆ ಮಾರಾಟವಾಗಿ ದಾಖಲೆ ಆಗಿತ್ತು. ಆದರೆ ಇದೀಗ ಬಿಡುಗಡೆಗೂ ಮುನ್ನವೇ ದಾಖಲೆ ಪ್ರಮಾಣದಲ್ಲಿ ಕೆಜಿಎಫ್ ಗಿಂತ ಎರಡು ಪಟ್ಟು ಹೆಚ್ಚಿನ ಬೆಲೆಗೆ ಜೇಮ್ಸ್ ರೈಟ್ಸ್ ಸೇಲ್​ ಆಗಿದೆ. ಮೂಲಗಳ ಪ್ರಕಾರ ವಿವಿಧ ಭಾಷೆಗಳು ಸೇರಿ 80 ಕೋಟಿಗೆ ಟಿವಿ ರೈಟ್ಸ್ ಸೇಲಾಗಿದೆ ಎಂದು ಹೇಳಲಾಗಿದೆ.

ಮಾಹಿತಿ ಪ್ರಕಾರ ಸೋನಿ ಡಿಜಿಟಲ್​ಗೆ 40 ಕೋಟಿ, ಕನ್ನಡ ಸುವರ್ಣಕ್ಕೆ13.80 ಕೋಟಿ ಹಾಗೂ ತೆಲುಗು ಮಾ ಟಿವಿಗೆ ಸುಮಾರು 5.70 ಕೋಟಿಗೆ ರೈಟ್ಸ್ ಮಾರಾಟವಾಗಿದೆ. ತಮಿಳಿನಲ್ಲಿ ಸನ್ ನೆಟ್ ವರ್ಕ್​ಗೆ 5.17 ಕೋಟಿ, ಮಲೆಯಾಳಂ 1.2 ಕೋಟಿ, ಭೋಜಪುರಿ 5.50 ಕೋಟಿ, ಹಿಂದಿ ಸೋನಿಗೆ 2.70 ಕೋಟಿಗೆ ಮಾರಾಟವಾಗಿದೆ.

ಜೇಮ್ಸ್ ಬಿಡುಗಡೆಗೂ ಮುನ್ನವೇ ಹಲವಾರು ಚಿತ್ರಮಂದಿರಗಳಲ್ಲಿ ಶೋಗಳು ಬುಕ್​ ಆಗಿವೆ. ಬೆಂಗಳೂರಿನ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರಲ್ಲಿ ಮುಂಜಾನೆ 5 ಗಂಟೆಗೆ ಶೋ ಆರಂಭವಾಗಿದೆ. ವೀರೇಶ್ ಚಿತ್ರಮಂದಿರದ ಇಂದು 12 ಶೋ ಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಕೆಲೆವೆಡೆ ನಿಂತುಕೊಂಡು ಅಭಿಮಾನಿಗಳು ಚಿತ್ರ ನೋಡಿರುವ ಘಟನೆ ನಡೆದಿದೆ.
ಅಪ್ಪು ಅವರ ಅಭಿನಯ, ಡ್ಯಾನ್ಸ್, ಫೈಟ್​ ಎಲ್ಲವೂ ಜೇಮ್ಸ್​ ಸಿನಿಮಾದಲ್ಲಿದ್ದು, ಅದನ್ನೆಲ್ಲ ನೋಡಿ ಅಪ್ಪು ಅಭಿಮಾನಿಗಳು ಅಪ್ಪು ಇಲ್ಲದೆ ಮರುಗುತ್ತಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!