18 ದಿನಗಳ ಹಿಂದೆಯಷ್ಟೆ ಭಾರತದಲ್ಲಿ ತೆರೆಕಂಡ ಸೈಡರ್ ಮ್ಯಾನ್ ಸರಣಿಯ ‘ಸ್ಪೈಡರ್ ಮ್ಯಾನ್- ನೋ ವೇ ಹೋಮ್’ ಸಿನಿಮಾ ಹಾಲಿವುಡ್ ಚಿತ್ರಗಳ ಪೈಕಿ ದಾಖಲೆಯ ಗಳಿಕೆಯತ್ತ ಮುಖ ಮಾಡಿದೆ.
ಈ ಸಿನಿಮಾ 259 ಕೋಟಿ ರೂ. ಗಳಿಸಿ ದಾಖಲೆ ಸೃಷ್ಟಿಸಿದೆ. ಇದುವರೆಗೂ ಭಾರತದಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಗಳಿಕೆಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಅವೆಂಜರ್ ಸರಣಿಯ ಇನ್ಫಿನಿಟಿ ವಾರ್ ಮತ್ತು ಎಂಡ್ ಗೇಮ್ ಇವೆ. ಮೂರನೇ ಸ್ಥಾನದಲ್ಲಿರುವ ಸ್ಪೈಡರ್ ಮ್ಯಾನ್ ಸಿನಿಮಾ ಇನ್ಫಿನಿಟಿ ವಾರ್ ಸಿನಿಮಾದ ಗಳಿಕೆಗೆ ಹತ್ತಿರ ಬಂದಿದ್ದು, ಮೊದಲ ಸ್ಥಾನ ಪಡೆಯುವ ಸಾಧ್ಯತೆಯೂ ಇದೆ. ಈ ಮೂರೂ ಸಿನಿಮಾಗಳು ಮಾರ್ವೆಲ್ ಸ್ಟುಡಿಯೋಸ್ ನಿರ್ಮಿತ ಎನ್ನುವುದು ವಿಶೇಷ ಆಗಿದೆ.
ಸ್ಪೈಡರ್ ಮ್ಯಾನ್ ಸಿನಿಮಾ ಚೀನಾದಲ್ಲಿ ಇನ್ನೂ ಬಿಡುಗಡೆ ಆಗಿಲ್ಲ. ಅಲ್ಲಿ ಬಿಡುಗಡೆಯಾದ ನಂತರ ಗಳಿಕೆಯಲ್ಲಿ ಈ ಸಿನಿಮಾ ವಿಶ್ವದಾಖಲೆ ಸೃಷ್ಟಿಸಲಿದೆ ಎಂದು ಸಿನಿಮಾ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.
ಬಹು ನಿರೀಕ್ಷಿತ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಭಾರತದಲ್ಲಿ ಡಿಸೆಂಬರ್ 17 ರಂದು ರಿಲೀಸ್ ಆಗಿತ್ತು. ಹಾಲಿವುಡ್ ನಟ ಟಾಮ್ ಹೊಲಾಂಡ್ ಮತ್ತು ಝೆಂಡಯಾ ಇಲ್ಲಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ಬೆನೆಡಿಕ್ಟ್ ಕಂಬರ್‌ಬ್ಯಾಚ್ ಡಾಕ್ಟರ್ ಸ್ಟ್ರೇಂಜ್ ಆಗಿ, ಜಾಕೋಬ್ ಬ್ಯಾಟಲೋನ್ ನೆಡ್ ಲೀಡ್ಸ್ ಆಗಿ ಮತ್ತು ಮಾರಿಸಾ ಟೋಮಿ ಆಂಟ್ ಮೇ ಆಗಿ ಕಾಣಿಸಿಕೊಂಡಿದ್ದಾರೆ. ಪೀಟರ್ ಪಾರ್ಕರ್‌ನ ಸಿವಿಲ್ ವಾರ್’ ಮೂಲಕ ‘ಕ್ಯಾಪ್ಟನ್ ಅಮೇರಿಕಾ ಸರಣಿಗೆ ಪದಾರ್ಪಣೆ ಮಾಡಿದ್ದ ಈ ಇಬ್ಬರು ಫ್ಯಾಂಟಸಿ ಹೀರೋಗಳೂ ಈ ಹಿಂದೆ ಎರಡು ಆವೃತ್ತಿಯ ‘ಅವೆಂಜರ್ಸ್’ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಭಾರತದಲ್ಲಿ ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ ಇಂಡಿಯಾ ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ‘ಸ್ಪೈಡರ್ಮ್ಯಾನ್: ನೋ ವೇ ಹೋಮ್’ ಚಿತ್ರವನ್ನು ಬಿಡುಗಡೆ ಮಾಡಿದೆ.
___
Be the first to comment