ಗಳಿಕೆಯಲ್ಲಿ ಮ್ಯಾಜಿಕ್ ಮಾಡಿದ ‘ಸ್ಪೈಡರ್​ ಮ್ಯಾನ್​’

ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಮಾಡಿದ್ದು, ಚಿತ್ರದ ಗಳಿಕೆ 8,000 ಕೋಟಿ ರೂಪಾಯಿ ಸಮೀಪಿಸಿದೆ.

ಈ ಚಿತ್ರ ಕ್ರಿಸ್​​ಮಸ್​ಗೂ ಒಂದು ವಾರ ಮೊದಲು ತೆರೆಗೆ ಬಂದಿತ್ತು. ಈ ಸಿನಿಮಾಗೆ ಅದ್ಭುತ ರೆಸ್ಪಾನ್ಸ್​ ಸಿಕ್ಕಿದ್ದು, ಬಾಕ್ಸ್​ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್​ ಮಾಡುತ್ತಿದೆ. ರಿಲೀಸ್​ ಆದ 12 ದಿನಕ್ಕೆ ಚಿತ್ರದ ಗಳಿಕೆ 8,000 ಕೋಟಿ ರೂಪಾಯಿ ಸಮೀಪಿಸಿರುವುದು ಚಿತ್ರ ತಂಡಕ್ಕೆ ಖುಷಿ ತಂದಿದೆ. ಭಾರತದ ಬಾಕ್ಸ್​ ಆಫೀಸ್​ನಲ್ಲೂ ಚಿತ್ರದ ಕಲೆಕ್ಷನ್​ ಉತ್ತಮವಾಗಿದೆ.

ಹಾಲಿವುಡ್​ನ ‘ಮೆಟ್ರಿಕ್ಸ್​’ ಸಿನಿಮಾ ಡಿಸೆಂಬರ್​ 22ರಂದು ರಿಲೀಸ್​ ಆಗಿದೆ. ಆದರೆ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿಲ್ಲ. ‘ಸ್ಪೈಡರ್​ ಮ್ಯಾನ್​’ ಚಿತ್ರದ ಕಲೆಕ್ಷನ್​ ಹೆಚ್ಚುತ್ತಿದ್ದು, ಈ ಚಿತ್ರ 12 ದಿನಕ್ಕೆ 7,501 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಹಿಂದೆ ‘ಅವೆಂಜರ್ಸ್​: ಇನ್​​ಫಿನಿಟಿ ವಾರ್​’ ಮತ್ತು ‘ಅವೆಂಜರ್ಸ್: ಎಂಡ್​ಗೇಮ್​’ ಈ ಎರಡು ಚಿತ್ರಗಳು ಮಾತ್ರ 11 ದಿನಕ್ಕೆ 1 ಬಿಲಿಯನ್​ ಗಡಿ ತಲುಪುವಲ್ಲಿ ಯಶಸ್ವಿ ಆಗಿದ್ದವು.

ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಸಿನಿಮಾ 2ಡಿ, 3ಡಿ, ಐಮ್ಯಾಕ್ಸ್​ 3ಡಿ ಸೇರಿ ಸಾಕಷ್ಟು ವಿಧದಲ್ಲಿ ಪ್ರೇಕ್ಷಕರಿಗೆ ಲಭಿಸುತ್ತಿದೆ. ಭಾರತೀಯ ಪ್ರೇಕ್ಷಕರು ಸಿನಿಮಾವನ್ನು ಸಾಕಷ್ಟು ಇಷ್ಟಪಟ್ಟಿದ್ದು, ಈ ಚಿತ್ರ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 155 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಲವು ಕಡೆ ವೀಕೆಂಡ್​ನಲ್ಲಿ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಮತ್ತಷ್ಟು ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ.

ವಿಶ್ವದಾದ್ಯಂತ ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಾಕಷ್ಟು ಕಡೆಗಳಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಕೆಲವೊಂದು ರಾಷ್ಟ್ರಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ಈ ಎಲ್ಲಾ ಕಾರಣಗಳಿಂದ ಈ ಚಿತ್ರದ ಗಳಿಕೆಗೆ ಹಿನ್ನಡೆ ಆಗಿದೆ. ಆದರೂ ಸಿನಿಮಾ ಉತ್ತಮ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!