ಕಾಂತಾರ ಬೆಂಗಳೂರು ನಗರದಲ್ಲಿ 20 ಸಾವಿರ ಪ್ರದರ್ಶನ ಕಂಡಿದ್ದು ಹೊಸ ದಾಖಲೆ ಸೃಷ್ಟಿಸಿದೆ.
ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡೂ ಸೇರಿ ಕಾಂತಾರ ಇಷ್ಟು ಪ್ರದರ್ಶನಗಳನ್ನು ಕಂಡಿದೆ. ಒಟಿಟಿಯಲ್ಲಿ ಕಾಂತಾರ ಬಂದಿದ್ದರೂ, ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಇನ್ನೂ ಕಾಂತಾರ ಪ್ರದರ್ಶನಗೊಳ್ಳುತ್ತಿದೆ.
ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರ ದಾಖಲೆ ಬರೆದಿತ್ತು. ಹೆಚ್ಚು ಪ್ರದರ್ಶನ ಬೆಂಗಳೂರಿನಲ್ಲಿಯೇ ಕಂಡಿತ್ತು. ಇದೀಗ ಈ ಸಾಲಿಗೆ ಕಾಂತಾರ ಸೇರಿದೆ.
ಕಾಂತಾರ ಸಿನಿಮಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಭಾರಿ ಗಳಿಕೆ ಕಂಡಿದೆ. ಇದೀಗ ತುಳುವಿನಲ್ಲಿಯೂ ಸಿನಿಮಾ ಡಬ್ ಆಗಿದ್ದು, ತುಳು ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕಾಂತಾರ ಚಿತ್ರ ಈಗ ಒಟ್ಟು 401 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ ಸುಮಾರು 168 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಹುತೇಕ ಎಲ್ಲ ಚಿತ್ರಮಂದರಿಗಳಲ್ಲಿ 50 ದಿನ ಪೂರೈಸಿದೆ. ಇದೀಗ ಕಾಂತಾರ ಬೆಂಗಳೂರು ನಗರದಲ್ಲಿಯೇ 20 ಸಾವಿರ ಪ್ರದರ್ಶನ ಕಂಡಿದ್ದು ಹೊಸ ದಾಖಲೆ ಸೃಷ್ಟಿಸಿದೆ. ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡೂ ಸೇರಿ ಕಾಂತಾರ ಇಷ್ಟು ಪ್ರದರ್ಶನಗಳನ್ನು ಕಂಡಿದೆ.
___

Be the first to comment