‘ರಾಮಾಯಣ’ ದೇಶದ ಅತ್ಯಂತ ದುಬಾರಿ ಚಿತ್ರ?!

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ದೇಶದ ಅತ್ಯಂತ ದುಬಾರಿ ಬಜೆಟ್ ಚಿತ್ರವಾಗಲಿದೆ ಎಂದು ವರದಿಯಾಗಿದೆ.

ರಾಮಾಯಣ ಚಿತ್ರವನ್ನು ನಿರ್ಮಿಸಲು ನಿರ್ಮಾಪಕರು ನೀರಿನಂತೆ ಹಣವನ್ನು ಖರ್ಚು ಮಾಡಲಿದ್ದಾರೆ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ನಿರ್ಮಾಪಕರು ರಾಮಾಯಣದ ಮೊದಲ ಭಾಗಕ್ಕೆ 100 ಮಿಲಿಯನ್ ಡಾಲರ್ ಅಂದರೆ ಸುಮಾರು 835 ಕೋಟಿ ರೂಪಾಯಿಗಳ ಬಜೆಟ್ ನ್ನು ಅಂತಿಮಗೊಳಿಸಿದ್ದಾರೆ.

ರಣಬೀರ್‌ ಕಪೂರ್‌ ನಟನೆಯ ‘ರಾಮಾಯಣ’ ಸಿನಿಮಾದ  ಶೂಟಿಂಗ್‌ ಈಗಾಗಲೇ ಆರಂಭವಾಗಿದ್ದು, ಚಿತ್ರದ ಸೆಟ್‌ಗಳಿಂದ ಫೋಟೋಗಳು ಸಹ ಲೀಕ್‌ ಆಗಿವೆ. ಚಿತ್ರೀಕರಣದ ಸಂದರ್ಭ  ರಾಮ – ಸೀತೆಯಾಗಿ ಕಾಣಿಸಿಕೊಂಡಿದ್ದರಣಬೀರ್ ಕಪೂರ್ – ಸಾಯಿಪಲ್ಲವಿ ಅವರ ಫೋಟೋಗಳು ಲೀಕ್‌ ಆಗಿದ್ದವು.

ರಾಮಾಯಣದ ಮೇಲೆ ಸಿನಿಮಾ ಮಾಡುವುದು  ಸುಲಭವಲ್ಲ. ಚಿತ್ರದಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಲು ನಿರ್ಮಾಪಕರು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ. ರಾಮಾಯಣ ಚಿತ್ರದಲ್ಲಿ ರಣಬೀರ್ ಕಪೂರ್,  ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಮಾಯಣಕ್ಕಿಂತ ಮೊದಲು, ಪ್ರಭಾಸ್ ಅವರ ‘ಕಲ್ಕಿ 2898 AD’ ದೇಶದ ಅತ್ಯಂತ ದುಬಾರಿ ಚಿತ್ರವಾಗಿತ್ತು. ನಾಗ್ ಅಶ್ವಿನ್ ಅವರ ಈ ಚಿತ್ರದ ಬಜೆಟ್ ಸುಮಾರು 600 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಚಿತ್ರ ‘2.0’ ಬಜೆಟ್ 570 ಕೋಟಿ ಎಂದು ಹೇಳಲಾಗಿದೆ. ಇದರ ನಂತರ ಎಸ್‌ಎಸ್ ರಾಜಮೌಳಿ ಅವರ ‘RRR’ ಬಜೆಟ್ 550 ಕೋಟಿ ರೂಪಾಯಿ ಆಗಿತ್ತು. ಪ್ರಭಾಸ್ ಅವರ ‘ಆದಿಪುರುಷ’, ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್ ಭಾಗ – 1’ ಬಜೆಟ್‌ 500 ಕೋಟಿ ಆಗಿದ್ದು, ‘ಸಾಹೋ’ 230 ಕೋಟಿ ರೂಪಾಯಿ ಮತ್ತು 600 ಕೋಟಿ ಬಜೆಟ್‌ನಲ್ಲಿ ‘ಕಲ್ಕಿ’ ನಿರ್ಮಾಣವಾಗುತ್ತಿದೆ.

ರಾಮಾಯಣ ಸಿನಿಮಾ ಮೂಲಕ ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಯೋಜನೆ ಇದೆ ಎನ್ನಲಾಗಿದೆ. ಯಶ್ ಅವರ ಕೆಜಿಎಫ್ 2 ತಯಾರಿಸಲು ನಿರ್ಮಾಪಕರು ಸುಮಾರು 100 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.  ರಾಮಾಯಣದ ಬಜೆಟ್‌ನಲ್ಲಿ ಯಶ್ ಅವರ ಕೆಜಿಎಫ್ 2 ನ್ನು 8 ಬಾರಿ ಮಾಡಬಹುದು.

ಸಿನಿಮಾವನ್ನು ಬಾಲಿವುಡ್ ನಿರ್ಮಾಪಕ ನಮಿತ್ ಮಲ್ಹೋತ್ರಾ – ನಟ ಯಶ್ ನಿರ್ಮಾಣ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ‘ರಾಮಾಯಣ’ ಮೂರು ಭಾಗಗಳಲ್ಲಿ ಬರಲಿದೆ. ಮೊದಲ ಭಾಗ  2026 ರಲ್ಲಿ ಪರದೆಗೆ ಅಪ್ಪಳಿಸಲಿದೆ.

ರಾವಣನಾಗಿ ಯಶ್, ಕೈಕೇಯಿ ಆಗಿ ಲಾರಾ ದತ್ತಾ, ಹನುಮಂತನಾಗಿ ಸನ್ನಿ ಡಿಯೋಲ್, ವಿಭೀಷಣ ಆಗಿ ವಿಜಯ್ ಸೇತುಪತಿ, ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!