ಉಪೇಂದ್ರ ಅಭಿನಯದ ‘ಹಿಂದೂ’ ಚಿತ್ರ ಯಾವತ್ತಿಗೂ ಅಭಿಮಾನಿಗಳು ನೋಡಲು ಸಾಧ್ಯವಾಗುವುದೇ ಇಲ್ಲ .ಹೌದು ಉಪೇಂದ್ರ ಅವರ ಭಾರಿ ಮಹತ್ವಾಕಾಂಕ್ಷೆಯ ಚಿತ್ರ ಕೇವಲ ಪೇಪರ್ ನಲ್ಲಿ ಉಳಿದು ಹೋಗುವುದಂತೂ ಸತ್ಯ .ಹಲವಾರು ವರ್ಷಗಳ ಹಿಂದೆ ಈ ಚಿತ್ರ ಸೆಟ್ಟೇರಿದ್ದು ಮುನಿರತ್ನ ಈ ಚಿತ್ರವನ್ನು ನಿರ್ಮಾಣ ಮಾಡಬೇಕಾಗಿತ್ತು ಉಪೇಂದ್ರ ಅವರದೇ ಕಥೆ ಚಿತ್ರಕಥೆ ಸಂಭಾಷಣೆ ಇದ್ದರೂ ನಿರ್ದೇಶನದ ಜವಾಬ್ದಾರಿಯನ್ನು ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮಾಡಬೇಕಿತ್ತು.ಆದರೆ ಕಾರಣಾಂತರಗಳಿಂದಾಗಿ ಚಿತ್ರ ಮುಂದುವರಿಯಲೇ ಇಲ್ಲ .
ಉಪೇಂದ್ರ ಅವರ ಚಿತ್ರಗಳನ್ನು ಮುಗಿಬಿದ್ದು ನೋಡುತ್ತಿದ್ದ ಕಾಲದಲ್ಲಿ ಇಂಥದ್ದೊಂದು ಚಿತ್ರವನ್ನ ಉಪೇಂದ್ರ ಮಾಡಲು ಆಗದಿದ್ದುದು ಏಕೆ ??ಹೌದು ಉಪೇಂದ್ರ ಹಿಂದೂ ಚಿತ್ರ ಅನೌನ್ಸ್ ಮಾಡಿದ ತಕ್ಷಣ ಸಾಕಷ್ಟು ದೊಡ್ಡ ವಿವಾದಕ್ಕೆ ಕಾರಣವಾದ ಚಿತ್ರ .ಹಿಂದೂ ಪರ ಸಂಘಟನೆಗಳು ಸ್ವತಃ ಉಪೇಂದ್ರರನ್ನು ಭೇಟಿ ಮಾಡಿ ಈ ಚಿತ್ರವನ್ನು ಮಾಡದಂತೆ ಉಪೇಂದ್ರ ರಲ್ಲಿ ಕೇಳಿಕೊಂಡಿದ್ದರು.ಅಷ್ಟೆಲ್ಲಾ ಕ್ರೇಜ್ ಹುಟ್ಟು ಹಾಕಿದ ಒಂದು ಚಿತ್ರ ಯಾಕೆ ಹಿಂದೂ ಪರ ಸಂಘಟನೆಗಳು ಹಾಗೂ ಮುಸ್ಲಿಂ ಪರ ಸಂಘಟನೆಗಳು ಉಪೇಂದ್ರಗೆ ಈ ಚಿತ್ರ ಮಾಡದಂತೆ ಕೇಳಿಕೊಂಡಿದ್ದರು.ಅಲ್ಲದೇ ಉಪೇಂದ್ರ ಅವರ ಆಪ್ತ ವಲಯದಲ್ಲಿದ್ದ ಹಲವಾರು ಉನ್ನತ ಮಟ್ಟದ ಅಧಿಕಾರಿಗಳು ಕೂಡ ಚಿತ್ರವನ್ನು ಇಲ್ಲಿಗೆ ಕೈಬಿಡುವಂತೆ ಅವರಲ್ಲಿ ವಿನಂತಿಸಿಕೊಂಡಿದ್ದರು, ಅವರೆಲ್ಲರ ಮನವಿಗೆ ಓಗೊಟ್ಟ ಉಪೇಂದ್ರ ಚಿತ್ರವನ್ನು ಮುಂದುವರೆಸಲಿಲ್ಲ.
ಹಾಗಾದರೆ ಚಿತ್ರದಲ್ಲಿ ಅಂತದ್ದೇನು ಇತ್ತು ಅಂತ ಹುಡುಕ ಹೊರಟರೆ ಉತ್ತರ ಸರಳ. ಉಪೇಂದ್ರ ಅವರ ಹಿಂದೂ ಚಿತ್ರ 2002ರಲ್ಲಿ ನಡೆದ ಗುಜರಾತ್ ನರಮೇಧದ ಗೋಧ್ರಾ ಹತ್ಯಾಕಾಂಡದ ಕಥೆಯನ್ನು ಒಳಗೊಂಡಿತ್ತು . ಸಾವಿರಾರು ಹಿಂದೂ ಮುಸ್ಲಿಂ ಸಾವಿಗೆ ಕಾರಣವಾದ ಆ ಹತ್ಯೆಯ ಎಳೆಯನ್ನಿಟ್ಟುಕೊಂಡು ಉಪೇಂದ್ರ ಅವರು ಹಿಂದೂ ಕತೆಯನ್ನು ಸಿದ್ಧಪಡಿಸಿದ್ದರು .ಚಿತ್ರದ ಪೋಸ್ಟರ್ ನಲ್ಲಿ ಕಾಣುವಂತೆ ಉಪೇಂದ್ರ ರಾಮನ ಅವತಾರದಲ್ಲಿದ್ದರೆ ಕೆಳಗಡೆ ನರಮೇಧದಲ್ಲಿ ಸುಟ್ಟ ರೈಲಿನ ಚಿತ್ರವಿದೆ .ಉಪೇಂದ್ರ ಆಪ್ತರು ಹೇಳುವ ಪ್ರಕಾರ ಉಪೇಂದ್ರ ಅವರ ಚಿತ್ರದ ಕ್ಯಾರೆಕ್ಟರೇ ಬಹಳ ವಿಶೇಷವಾಗಿತ್ತು .ಚಿತ್ರದಲ್ಲಿ ಉಪೇಂದ್ರ ಅವರ ಪಾತ್ರ ಐವತ್ತು ಪರ್ಸೆಂಟ್ ಪಾಸಿಟಿವ್ ಇದ್ದರೆ ಐವತ್ತು ಪರ್ಸೆಂಟ್ ನೆಗೆಟಿವ್ ಆಗಿತ್ತು .ಒಬ್ಬ ಪಾಕಿಸ್ತಾನಿ ಭಯೋತ್ಪಾದಕನಿಂದ ಹಿಡಿದು ಮಹಾನ್ ಹಿಂದೂ ನಾಯಕನವರೆಗೆ ಉಪೇಂದ್ರರ ಪಾತ್ರ ಕೂಡಿತ್ತು .ಆದರೆ ಹೆಸರೇ ಹೇಳುವಂತೆ ಚಿತ್ರದ ಟೈಟಲ್ ಹಿಂದೂ ಆಗಿದ್ದರಿಂದ ಚಿತ್ರದಲ್ಲಿ ಉಪೇಂದ್ರ ರಾಮನ ಪಾತ್ರ ವೇಷವನ್ನು ಧರಿಸಿದ್ದರಿಂದ ಹಿಂದೂ ಸಂಘಟನೆಗಳ ತೀವ್ರ ವಿರೋಧದ ನಡುವೆ ಈ ಚಿತ್ರ ಮಾಡಲು ಸಾಧ್ಯವಿಲ್ಲ ಅಂತ ಚಿತ್ರ ಕೈ ಬಿಟ್ಟರು. ಆದರೆ ಉಪೇಂದ್ರ ನಿಜವಾಗಲೂ ಹೇಳಲು ಹೊರಟಿದ್ದ ಅಂಶ ನಿಜವಾಗಿ ಹಿಂದೂ ಅಂದರೆ ಯಾರು ಯಾಕೆ ಮನುಷ್ಯನನ್ನೇ ಮನುಷ್ಯ ಬಡಿದು ‘ಜಾತಿ’ ಎನ್ನುವ ಹೆಸರಿನಲ್ಲಿ ಸಾಯುತ್ತಾನೆ ಯಾಕೆ ನರಮೇಧಗಳ ಗುತ್ತವೆ???ಯಾಕೆ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಜೊತೆ ಕನಿಷ್ಠ ಎಪ್ಪತ್ತು ವರ್ಷ ಜೊತೆಗೆ ಬಾಳುವುದಕ್ಕೆ ಸಾಧ್ಯವಿಲ್ಲ ??ಎನ್ನುವ ಅದೇ ಅವರ ಫಿಲಾಸಫಿಕಲ್ thoughtನ್ನು ಕಮರ್ಷಿಯಲ್ ಅಂಶ ಬೆರೆಸಿ ಉಪೇಂದ್ರ ಕಥೆ ರೆಡಿ ಮಾಡಿದ್ದರು .ದುರದೃಷ್ಟಕರ ಸಂಗತಿಯೆಂದರೆ ಯಾವುದೋ ಒಂದಿಷ್ಟು ಕೆಲವರ ವಿರೋಧದಿಂದಾಗಿ ಕನ್ನಡಕ್ಕೆ ಒಂದು ಮಹತ್ತರವಾದ ಚಿತ್ರವನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ .ಯಾರಿಗೆ ಗೊತ್ತು ಒಂದು ವೇಳೆ ಉಪೇಂದ್ರ ಅವರೇ ಆ ಸಿನಿಮಾವನ್ನು ನಿರ್ದೇಶಿಸಿದ್ದಾರೆ ಅವತ್ತಿಗೆ ಉಪೇಂದ್ರರಿಗೆ ಇರುವಂತಹ ಹಠಕ್ಕೆ ಆ ಚಿತ್ರ ಇನ್ನೊಂದು ಓಂ ಆಗುತ್ತಿತ್ತೇನೋ, ಇನ್ನೊಂದು A ಆಗುತ್ತಿತ್ತೇನೋ, ಇನ್ನೊಂದು ಉಪೇಂದ್ರ ಆಗುತ್ತಿತ್ತೇನೋ ಆದರೆ ಅತಿದೊಡ್ಡ ದೌರ್ಭಾಗ್ಯವೆಂದರೆ ಆ ಚಿತ್ರ ಯಾವತ್ತಿಗೂ ಆಗುವುದೇ ಇಲ್ಲ ಅನ್ನುವುದು …😔
Be the first to comment