ರಚಿತಾ ರಾಮ್

‘ಕೂಲಿ’ ಚಿತ್ರತಂಡ ಸೇರಿಕೊಂಡ ಬುಲ್ ಬುಲ್!

ಡಿಂಪಲ್ ಕ್ವೀನ್ ರಚಿತಾ ರಾಮ್, ಕೂಲಿ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುತ್ತಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಅವರೊಂದಿಗೆ ರಚಿತಾ ರಾಮ್  ನಟಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಚಿತ್ರದಲ್ಲಿ ಶ್ರುತಿ ಹಾಸನ್, ಮಹೇಂದ್ರನ್ ಮತ್ತು  ಸತ್ಯರಾಜ್ ಕಾಣಿಸಿಕೊಳ್ಳುತ್ತಿದ್ದಾರೆ.

ಸುಪರ್ ಮಾಚಿ ಚಿತ್ರದ ಮೂಲಕ ತೆಲುಗು ಚಿತ್ರಗಳಲ್ಲಿ ಛಾಪು ಮೂಡಿಸಿರುವ ರಚಿತಾ ರಾಮ್, ಕೂಲಿ ಚಿತ್ರದ ಕುರಿತು ಚರ್ಚೆ ನಡೆಸಲು ಚೆನ್ನೈಗೆ ಭೇಟಿ ನೀಡಿದ್ದಾರೆನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ  ಅಧಿಕೃತ ಮಾಹಿತಿ ನೀಡಿಲ್ಲ.

ರಚಿತಾ ಅವರು ನಾಗಶೇಖರ್ ಅವರ ಸಂಜು ವೆಡ್ಸ್ ಗೀತಾ 2 ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಕೂಲಿ ಚಿತ್ರದಲ್ಲಿ   ಉಪೇಂದ್ರ ಅವರು ನಟಿಸುತ್ತಿದ್ದಾರೆನ್ನಲಾಗಿದ್ದು, ಈ ವಿಚಾರವನ್ನು ಉಪೇಂದ್ರ ಅವರೇ ದೃಢಪಡಿಸಿದ್ದರು. ರಜನಿಕಾಂತ್ ಜೊತೆ ನಟಿಸುತ್ತಿರುವುದು ಖುಷಿ ವಿಚಾರ ಎಂದು ಹೇಳಿದ್ದರು. ಆದರೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದರು.

ಕೂಲಿ ಚಿತ್ರ ರಜನಿಕಾಂತ್ ಅವರ 171 ನೇ ಚಿತ್ರ.  ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶ್ರುತಿ ಹಾಸನ್ ಮತ್ತು ಮಹೇಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಮೊದಲು ತಲೈವಾ 171 ಎನ್ನುವ ಶೀರ್ಷಿಕೆ ಇಡಲಾಗಿತ್ತು. ಸಿನಿಮಾ ತಮಿಳಿನ ಜೊತೆಗೆ ತೆಲುಗಿನಲ್ಲೂ ಬಿಡುಗಡೆಯಾಗಲಿದೆ.

ರಚಿತಾ ರಾಮ್ ಅವರು ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಅವರೊಂದಿಗೆ ನಟಿಸಿ ಹಿಟ್ ಚಿತ್ರಗಳನ್ನು ನೀಡಿದ್ದು, ಇದೀಗ ತಮಿಳು ಚಿತ್ರರಂಗದಲ್ಲೂ ಮಿಂಚಲು ಸಜ್ಜಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!