ಕೆಜಿಎಫ್-2 ಚಿತ್ರತಂಡ, ಆರ್ ಸಿ ಬಿ ಬೆಂಬಲಕ್ಕೆ ನಿಂತಿದ್ದು, ಏಪ್ರಿಲ್ 19ರಂದು ನಡೆದ ಲಕ್ನೋ ವಿರುದ್ಧದ ಪಂದ್ಯ ವೀಕ್ಷಿಸಿ ಸಂಭ್ರಮಿಸಿದೆ.
ಆರ್ ಸಿ ಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ರೋಚಕ ಪಂದ್ಯ ವೀಕ್ಷಿಸಲು ಅಧೀರ ಸಂಜಯ್ ಮತ್ತು ರಮಿಕಾ ಸೇನ್ ರವೀನಾ ಟಂಡನ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಸಿನಿಮಾ ಗೆದ್ದ ಖುಷಿಯಲ್ಲಿರುವ ಇವರು ಆರ್ ಸಿಬಿ ಗೆ ಬೆಂಬಲ ವ್ಯಕ್ತಪಡಿಸಿದರು. ಆರ್ ಸಿ ಬ ಜೆರ್ಸಿ ಧರಿಸಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ಸಂಜಯ್ ದತ್ ಮತ್ತು ರವೀನಾ ಡಂಟನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚಿಗಷ್ಟೆ ಆರ್ ಸಿ ಬಿ ತಂಡ ಕೆಜಿಫ್-2 ಸಿನಿಮಾವನ್ನು ವೀಕ್ಷಿಸಿ ಸಂಭ್ರಮಿಸಿತ್ತು. ನಾಯಕ ಫಾಫ್ ಡುಪ್ಲೆಸಿಸ್, ಮ್ಯಾಕ್ಸ್ ವೆಲ್, ಹರ್ಷಲ್ ಪಟೇಲ್ ಸೇರಿದಂತೆ ಇಡೀ ತಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಂತಸ ಪಟ್ಟಿತ್ತು. ಆರ್ ಸಿ ಬಿ ತಂಡಕ್ಕೆ ಸಪೋರ್ಟ್ ಮಾಡಲು ಕೆಜಿಎಫ್-2 ತಂಡ ಕ್ರೀಡಾಂಗಣಕ್ಕೆ ಎಂಟ್ರಿ ನೀಡಿತ್ತು.
ಸ್ಯಾಂಡಲ್ ವುಡ್ ನ ಅತೀ ದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಆರ್ ಸಿ ಬಿ ಜೊತೆ ಕೈಜೋಡಿಸಿದ್ದು ಮೊದಲ ಬಾರಿಗೆ ಕ್ರಿಕೆಟ್ ತಂಡದ ಜೊತೆ ಸಿನಿಮಾ ನಿರ್ಮಾಣ ಸಂಸ್ಥೆ ಭಿನ್ನ ರೀತಿಯಲ್ಲಿ ಪ್ರಮೋಷನ್ ಗೆ ಮುಂದಾಗಿತ್ತು. ಕೆಜಿಎಫ್-2 ಟ್ರೈಲರ್ ನಲ್ಲಿ ಆರ್ ಸಿ ಬಿ ಆಟಗಾರನ್ನು ಸೇರಿಸಿ ಹೊಸ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಟ್ರೈಲರ್ ನಲ್ಲಿ ಕೆಜಿಎಫ್2 ಪಾತ್ರಕ್ಕೆ ಆರ್ ಸಿ ಬಿ ಆಟಗಾರರನ್ನು ಹೋಲಿಸಲಾಗಿತ್ತು. ಹೊಂಬಾಳೆ ಫಿಲ್ಮ್ಸ್ ಮತ್ತು ಆರ್ ಸಿ ಬಿ ಒಪ್ಪಂದ ಪ್ರಕಾರ ಆರ್ ಸಿ ಬಿ ತಂಡ ಕೆಜಿಎಫ್-2 ವೀಕ್ಷಿಸಿತ್ತು. ಈಗ ಕೆಜಿಎಫ್-2 ತಂಡ ಪಂದ್ಯ ವೀಕ್ಷಿಸಿ ಆರ್ ಸಿ ಬಿ ಸಪೋರ್ಟ್ ಮಾಡಿದೆ.
ಸಂಜಯ್ ದತ್ ಮತ್ತು ರವೀನಾ ಟಂಡನ್ ಜೊತೆ ಕೆಜಿಎಫ್-2 ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಸಹ ಆರ್ ಸಿ ಬಿ ಪಂದ್ಯ ವೀಕ್ಷಿಸಿದ್ದಾರೆ. ಪಂದ್ಯ ವೀಕ್ಷಣೆಯ ಸಂಭ್ರಮದ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.
ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ 2 ಭರ್ಜರಿ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಸಿನಿಮಾ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.
___

Be the first to comment