ಆರ್‌ಸಿಬಿ ಜೊತೆ ಹೊಸ ಸಾಹಸಕ್ಕೆ ಮುಂದಾದ ಹೊಂಬಾಳೆ ಫಿಲ್ಮ್ಸ್!

ಕೆಜಿಎಫ್ ಮತ್ತು ಸಲಾರ್‌ಗಳಂತಹ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಮಾಡುತ್ತಿರುವ ಹಾಗೂ ಭಾರತದ ಪ್ರಮುಖ ಚಲನಚಿತ್ರ ನಿರ್ಮಾಣ ಕಂಪನಿಗಳಲ್ಲಿ ಒಂದಾಗಿರುವ ಹೊಂಬಾಳೆ ಫಿಲ್ಮ್ಸ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆ ವಿಶೇಷ ಸಹಭಾಗಿತ್ವದಲ್ಲಿ ಕ್ರೀಡೆ ಮತ್ತು ಚಲನಚಿತ್ರ ಮನರಂಜನೆಯ ಪರಿಪೂರ್ಣ ಸಮ್ಮಿಲನಕ್ಕೆ ಸಹಿ ಮಾಡಿವೆ. ಈ ಸಹಯೋಗವು ಭರಪೂರ ಮನರಂಜನೆ, ಗ್ಲಾಮರ್, ಚಲನಚಿತ್ರಗಳು, ಕ್ರೀಡೆಗಳ ಅದ್ಭುತ ಸಂಗಮವನ್ನುಂಟುಮಾಡಲಿದೆ.. ಕ್ರಿಕೆಟ್ ಮತ್ತು ಚಲನಚಿತ್ರಗಳಲ್ಲಿ ಅತ್ಯುತ್ಸಾಹ ಹೊಂದಿರುವ ದೇಶದಲ್ಲಿ ಬೆಂಗಳೂರಿನ ಎರಡು ಅತ್ಯಂತ ಪ್ರೀತಿಯ ಕ್ಷೇತ್ರಗಳ, ಹಿಂದೆಂದೂ ನೋಡಿರದ ಸಂಯೋಜನೆಯನ್ನು ಈ ಸಹಭಾಗಿತ್ವವು ರೂಪಿಸುತ್ತದೆ. ಭಾವನೆಗಳು ಮತ್ತು ಬಲದ ರೋಲರ್ ಕೋಸ್ಟರ್ ಜತೆ ಅಭಿಮಾನಿಗಳಿಗೆ ಹೈವೋಲ್ಟೇಜ್ ಥ್ರಿಲ್ ನೀಡುವ ಗುರಿಯನ್ನು ಹೊಂದಲಾಗಿದೆ.

ಈ ಸಹಭಾಗಿತ್ವವನ್ನು ಉದ್ದೇಶಿಸಿ ಹೊಂಬಾಳೆ ಫಿಲ್ಮ್ಸ್‌ ನ ಸಂಸ್ಥಾಪಕರಾದ ವಿಜಯ್ ಕಿರಗಂದೂರು ಅವರು ಹೀಗೆ ಹೇಳಿದ್ದಾರೆ: “ಸಿನಿಮಾ ಮಾಡುವುದು ನನ್ನ ಫ್ಯಾಷನ್. ಕ್ರಿಕೆಟ್ ಪ್ರೇಮಿಯಾಗಿ ಮತ್ತು ಕನ್ನಡಿಗನಾಗಿ ಕ್ರಿಕೆಟ್ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿದೆ. ನಮ್ಮ ಅಭಿಮಾನಿಗಳಿಗೆ ಭರಪೂರ ಮನರಂಜನೆ ಮತ್ತು ಥ್ರಿಲ್ ಖಚಿತಪಡಿಸಿಕೊಳ್ಳಲು ತೊಡಗಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಮತ್ತು ಆರ್‌ಸಿಬಿ ಎರಡಕ್ಕೂ ನಮ್ಮ ಬೆಂಗಳೂರೇ ತವರಾಗಿರುವುದರಿಂದ ಈ ಪಾಲುದಾರಿಕೆ ಸಹಜವಾಗಿದೆ. ಸ್ವಲ್ಪ ಸಮಯದಿಂದ ಈ ಸಹಯೋಗದ ಬಗ್ಗೆ ಕೆಲಸ ಮಾಡುತ್ತಿರುವ ನಾವು ಈ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ.

2022 ನಮ್ಮೆಲ್ಲರಿಗೂ ರಾಯಲ್‌ ಆಗಿರಲಿದೆ.  ಕ್ರೀಡೆ ಮತ್ತು ಮನರಂಜನೆ ವಿಚಾರದಲ್ಲಿ ಕ್ಷಣಮಾತ್ರದಲ್ಲಿ ಬದಲಾಗುವ ಅಭಿಮಾನಿಗಳ ನಡವಳಿಕೆ ಮತ್ತು ಆದ್ಯತೆಗಳನ್ನು ಅರಿತು ಅವರ ನಾಡಿ ಮಿಡಿತಕ್ಕೆ ಬಲ ನೀಡುವ ಜತೆ ಹೊಸ ಮನರಂಜನಾ ಮಾರ್ಗಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಪ್ರಸರಣ ಉದ್ಯಮಕ್ಕೆ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಕೈ ಜೋಡಿಸಲು, ಆರಂಭಿಸಲು ಮತ್ತು ರಾಯಲ್ ಆಗಿ ಸೆಲಬ್ರೇಟ್‌ ಮಾಡಲು ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ಚಲನಚಿತ್ರ ಮನರಂಜನಾ ವಲಯದಲ್ಲಿ ನಮ್ಮ ಅಭಿಮಾನಿಗಳಿಗೆ ಮ್ಯಾಜಿಕ್ ಮೂಮೆಂಟ್‌ಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ”

ಈ ಸಹಭಾಗಿತ್ವವು ಖಂಡಿತವಾಗಿಯೂ ಚಲನಚಿತ್ರ ಮನರಂಜನೆ ಮತ್ತು ಕ್ರೀಡಾ ಉದ್ಯಮದ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ಮುನ್ನುಡಿ ಬರೆಯಲಿದೆ. ಈ ಎರಡು ದಿಗ್ಗಜ ಸಂಸ್ಥೆಗಳ ಸಂಗಮವು ಐಪಿಎಲ್ ಆರಂಭದಿಂದ ಶುರುವಾದ ಥ್ರಿಲ್ ಹಾಗೂ ರೋಮಾಂಚನಕಾರಿ ಅನುಭವದ ಹೊಸ ಸಾಧ್ಯತೆಗಳಿಗೆ ಮುನ್ನುಡಿ ಬರೆಯುವ ಭರವಸೆ ಮೂಡಿಸಲಿದೆ.

ಹೊಂಬಾಳೆ ಫಿಲ್ಮ್ಸ್ ಅತ್ಯಂತ ಪ್ರಮುಖ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ ಹಾಗೂ ಆರ್‌ಸಿಬಿ ಐಪಿಎಲ್‌ನ ಅತ್ಯಂತ ನೆಚ್ಚಿನ ತಂಡವಾಗಿದೆ ಮತ್ತು ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ದಿಗ್ಗಜ ಆಟಗಾರರನ್ನೊಳಗೊಂಡಿರುವುದರಿಂದ ಈ ಸಹಯೋಗ ಅತ್ಯಂತ ರೋಮಾಂಚನಕಾರಿಯಾಗಿರಲಿದ್ದು, ಅಭಿಮಾನಿಗಳಿಗೆ ಮರೆಯಲಾಗದ ಅನುಭವ ನೀಡಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!