RC Brothers: ನವೆಂಬರ್ ನಲ್ಲಿ ಆರ್‌ಸಿ ಬ್ರದರ್ಸ್ ತೆರೆಗೆ

ಹಾಸ್ಯ ಪ್ರಧಾನ ಚಿತ್ರವಾದ ಆರ್ ಸಿ ಬ್ರದರ್ಸ್ ಚಿತ್ರ ನವೆಂಬರ್ ನಲ್ಲಿ ತೆರೆಗೆ ಬರಲಿದೆ.

ಪತ್ರಿಕಾಗೋಷ್ಠಿಯಲ್ಲಿ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ಮಣಿ ಶಶಾಂಕ್, ನನಗೆ ಚಿತ್ರರಂಗದಲ್ಲಿ ಅಪಾರ ಆಸಕ್ತಿ ಇದೆ. ನಿರ್ದೇಶನದ ಬಗ್ಗೆ ತರಬೇತಿಯನ್ನು ಪಡೆದಿದ್ದೇನೆ. ತಬಲ ನಾಣಿ ಅವರು ಒಂದು ಉತ್ತಮ ಕಥೆ ಇದೆ ಎಂದು ಹೇಳಿದಾಗ ಆರ್ ಸಿ ಬ್ರದರ್ಸ್ ಚಿತ್ರ ನಿರ್ಮಾಣ ಮಾಡಲು ಮುಂದಾದೆ. ನವೆಂಬರ್ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಚಿತ್ರದ ನಿರ್ದೇಶಕ ಪ್ರಕಾಶ್ ಕುಮಾರ್ ಮಾತನಾಡಿ, ಈ ಚಿತ್ರ ಫ್ಯಾಮಿಲಿ ಆಡಿಯನ್ಸ್ ಆಧಾರಿತ ಆಗಿದೆ. ಮುಖ್ಯ ಪಾತ್ರದಲ್ಲಿ ತಬಲ ನಾಣಿ ಹಾಗೂ ಕುರಿ ಪ್ರತಾಪ್ ಅವರು ನಟಿಸಿದ್ದಾರೆ. ನಾಯಕಿಯರಾಗಿ ಸಂಭ್ರಮಶ್ರೀ ಹಾಗೂ ನಯನ ಇದ್ದಾರೆ. ಈ ಚಿತ್ರ ಅಣ್ಣ ತಮ್ಮಂದಿರ ಮೇಲೆ ಮಾಡಿದ ಕಥೆಯಾಗಿದೆ. ಇದೊಂದು ಕಾಮಿಡಿ ಚಿತ್ರ ಎಂದು ಹೇಳಿದರು.

ಚಿತ್ರವನ್ನು 30 ದಿನಗಳ ಕಾಲ ಬೆಂಗಳೂರಿನಲ್ಲಿ ಶೂಟ್ ಮಾಡಲಾಗಿದೆ. ಚಿತ್ರ ಸಧ್ಯವೇ ಸೆನ್ಸರ್ ಗೆ ಹೋಗುತ್ತಿದೆ. ಕಿರಣ್ ಕುಮಾರ್ ಕ್ಯಾಮರಾ, ಅರ್ಜುನ್ ಎಡಿಟಿಂಗ್ ಮಾಡಿದ್ದಾರೆ ಎಂದರು.

ತಬಲ ನಾಣಿ ಮಾತನಾಡಿ, ಚಿತ್ರದಲ್ಲಿ ಸಹೋದರರ ನಡುವೆ ಹಾಸ್ಯ ರೀತಿಯಲ್ಲಿ ಕಥೆ ಹೇಳಲಾಗಿದೆ. ಚಿತ್ರದಲ್ಲಿ ತಮ್ಮ ಸರ್ಕಾರಿ ಕೆಲಸದಲ್ಲಿದ್ದಾಗ ಸ್ಥಿತಿವಂತ ಅಲ್ಲದ ಅಣ್ಣನಿಗೆ ಹೆಣ್ಣು ಕೊಡಲು ಹೆತ್ತವರು ಹಿಂದೆ ಮುಂದೆ ನೋಡುವ ಸನ್ನಿವೇಶ ಇದೆ. ಇದನ್ನು ಹಾಸ್ಯವಾಗಿ ಹೇಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕುರಿ ಪ್ರತಾಪ್, ನಾಯಕಿಯರಾದ ಸಂಭ್ರಮ ಶ್ರೀ, ನಯನ, ತಾಂತ್ರಿಕ ತಂಡದವರು ಇದ್ದರು.
_______

Be the first to comment

Leave a Reply

Your email address will not be published. Required fields are marked *

Translate »
error: Content is protected !!