ಜ.26ಕ್ಕೆ RC ಬ್ರದರ್ಸ್ ತೆರೆಗೆ

ತಬಲ ನಾಣಿ ಹಾಗೂ ಕುರಿ ಪ್ರತಾಪ್ ಜಂಟಿಯಾಗಿ ತೆರೆ ಹಂಚಿಕೊಂಡು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ RC ಬ್ರದರ್ಸ್ ಜನವರಿ 26ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.

ಆರ್.ಸಿ. ಬ್ರದರ್ಸ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಚಿತ್ರಕ್ಕೆ ಶುಭ ಹಾರೈಸಿದರು.

ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ಚಿತ್ರ ಬಿಡುಗಡೆಯಾಗಿ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ತಬಲ ನಾಣಿ ಮಾತನಾಡಿ, ಹೆಣ್ಣು ನೋಡಲು ಹೋದಾಗ ಅಣ್ಣನನ್ನು ಬಿಟ್ಟು, ತಮ್ಮನಿಗೆ ಹೆಣ್ಣು ಕೊಡಲು ಹೋಗುವವರು ಇರುತ್ತಾರೆ. ಈ ಚಿತ್ರದಲ್ಲಿ ತಮ್ಮ ಅಣ್ಣನಿಗೆ ಮದುವೆ ಆಗದೆ ನನ್ನ ಪ್ರಸ್ತ ಆಗುವುದಿಲ್ಲ ಎನ್ನುವ ಪಾತ್ರ ಇದೆ. ತಮಾಷೆ ಆಗಿ ನಿರ್ದೇಶಕರು ಚಿತ್ರವನ್ನು ಮಾಡಿದ್ದಾರೆ. ಚಿತ್ರದಲ್ಲಿ ಇಬ್ಬರು ಹೀರೊಯಿನ್ ಇದ್ದಾರೆ ಎಂದು ಹೇಳಿದರು.

ಕಾಮಿಡಿ ಜೊತೆಗೆ ಜೀವನದ ನೋವನ್ನು ನಿರ್ದೇಶಕರು ಹೇಳಿದ್ದಾರೆ. ಇದು ಕುಟುಂಬ ಸಮೇತ ನೋಡಬಹುದಾದ ಚಿತ್ರ. ಎಲ್ಲರೂ ಚಿತ್ರ ನೋಡಿ ಹರಸಿ ಎಂದು ಕೋರಿದರು

ಅನುಗ್ರಹ ಎಂಟರ್ಟೈನ್ಮೆಂಟ್
ಸಂಸ್ಥೆಯಡಿಯಲ್ಲಿ ಮಣಿ ಶಶಾಂಕ್ ಹಾಗೂ ಶ್ರೀಮತಿ ಸಹನ ಗಿರೀಶ್ ಸಹ ನಿರ್ಮಾಣ,
ಪ್ರಕಾಶ್ ಕುಮಾರ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!