ನಿರ್ದೇಶನ: ಸಂತೋಷ್ ಕೊಡಂಕೇರಿ
ಪಾತ್ರ ವರ್ಗ: ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ರಾಕೇಶ್ ಮಯ್ಯ, ಪದ್ಮಜಾ ರಾವ್ ಇತರರು
ರೇಟಿಂಗ್: 3.5/5
ಕೆಲವೊಂದು ಸಣ್ಣ ವಿಚಾರಗಳು ಹೇಗೆ ದೊಡ್ಡದಾಗುತ್ತವೆ? ಸಮಾಜ ಎಷ್ಟೇ ಮುಂದುವರೆದರೂ, ಕೆಲವರ ದೃಷ್ಟಿಕೋನ ಬದಲಾಗುವುದಿಲ್ಲ ಎನ್ನುವ ಕಥಾ ಸಾರಾಂಶವನ್ನು ತೆರೆಯ ಮೇಲೆ ಈ ವಾರ ತಂದಿರುವ ಚಿತ್ರ” ರವಿಕೆ ಪ್ರಸಂಗ”.
ಸಿನಿಮಾದ ಶೀರ್ಷಿಕೆ ಹೇಳುವಂತೆ ಇಡೀ ಚಿತ್ರ ರವಿಕೆಯ ಸುತ್ತ ಸುತ್ತುತ್ತದೆ. ವಧು ಪರೀಕ್ಷೆಗೆ ಸೂಕ್ತವಾದ ಕನಸಿನ ರವಿಕೆಯನ್ನು ಕೆಡಿಸಿದ ಟೈಲರ್ ವಿರುದ್ಧ ಕಾನೂನು ಸಮರಕ್ಕೆ ಮುಂದಾಗುವ ಯುವತಿಯ ಹೋರಾಟದ ಕಿಚ್ಚು ಏನಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ನಿರ್ದೇಶಕರು ಚಿತ್ರದಲ್ಲಿ ಸೀಮಿತ ಪಾತ್ರಗಳನ್ನು ಬಳಸಿಕೊಂಡು ರವಿಕೆಯ ಚೌಕಟ್ಟಿನಲ್ಲಿ ಚಿತ್ರವನ್ನು ಕಟ್ಟಿಕೊಡುವ ಯತ್ನವನ್ನು ಮಾಡಿದ್ದಾರೆ. ಚಿತ್ರ ದಕ್ಷಿಣ ಕನ್ನಡದ ಪರಿಸರ ಹಾಗೂ ಅಲ್ಲಿನ ಕನ್ನಡದಲ್ಲಿ ಮೂಡಿ ಬಂದಿದೆ. ಬದಲಾಗದ ಜನರ ಮನಸ್ಥಿತಿಯನ್ನು ಚಿತ್ರದಲ್ಲಿ ತೋರಿಸುವ ಯತ್ನವನ್ನು ಮಾಡಲಾಗಿದೆ.
ಚಿತ್ರವನ್ನು ನೈಜವಾಗಿ ಕಟ್ಟಿಕೊಡುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಗೀತಾ ಭಾರತಿ ಭಟ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಪದ್ಮಜಾ ರಾವ್, ಸಂಪತ್ ಮೈತ್ರೆಯ ಇತರರು ಚಿತ್ರದ ಸನ್ನಿವೇಶಗಳಿಗೆ ತಕ್ಕಂತೆ ನಟಿಸಿದ್ದಾರೆ.
ಪಾವನ ಸಂತೋಷ ರವರ ಕಥೆ, ಸಂಭಾಷಣೆ ಚಿತ್ರದಲ್ಲಿ ಪ್ಲಸ್ ಆಗಿ ಕಾಣಿಸಿದೆ. ಒಂದು ಒಳ್ಳೆಯ ಕಂಟೆಂಟ್ ಚಿತ್ರವನ್ನು ನೋಡಬೇಕು ಎನ್ನುವವರಿಗೆ ರವಿಕೆ ಪ್ರಸಂಗ ಇಷ್ಟವಾಗಬಹುದು.
___
Be the first to comment