ರವಿಚಂದ್ರನ್ ಹೊಸ ಸಿನಿಮಾ ‘ಐ ಆ್ಯಮ್ ಗಾಡ್’ ಬಿಗ್ ಬಾಸ್ ವೇದಿಕೆಯಲ್ಲಿ ಘೋಷಣೆಯಾಗಿದೆ.
ರವಿಚಂದ್ರನ್ ಅವರೇ ನಿರ್ದೇಶನ, ನಿರ್ಮಾಣ ಸೇರಿದಂತೆ ಎಲ್ಲವನ್ನೂ ಸಂಪೂರ್ಣವಾಗಿ AI ತಂತ್ರಜ್ಞಾನ ಬಳಸಿ ನಿಭಾಯಿಸಿದ್ದಾರೆ. ಈ ಚಿತ್ರ 30-35 ಹಾಡುಗಳನ್ನು ಒಳಗೊಂಡಿದೆ. ರವಿಚಂದ್ರನ್ ಮೇ 30ರಂದು ಹುಟ್ಟುಹಬ್ಬದಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ.
ಎಲಿಮಿನೇಟ್ ಮಾಡಲು ರವಿಚಂದ್ರನ್ ಅವರು ಬಿಗ್ ಬಾಸ್ ವೇದಿಕೆಗೆ ಬಂದ ವೇಳೆ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಎರಡೂವರೆ ವರ್ಷದಿಂದ ಸಿನಿಮಾ ಮಾಡ್ತಾ ಇದೀನಿ. 400 ದಿನ ಶೂಟ್ ಮಾಡಿದ್ದೇನೆ. ಈ ಸಿನಿಮಾ ಮಾಡಿದ್ದೇನೆ. ಎಐ ಇದೆ. ಕ್ಯಾಮೆರಾಮೆನ್ ಬಿಟ್ರೆ ಉಳಿದೆಲ್ಲವನ್ನೂ ನಾನೋಬ್ನೇ ಮಾಡಿದ್ದು’ ಎಂದು ರವಿಚಂದ್ರನ್ ಮಾಹಿತಿ ನೀಡಿದರು.
‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 30-35 ಹಾಡು ಬರುತ್ತೆ. ಇದಕ್ಕೆ ಮ್ಯೂಸಿಕ್ ಡೈರೆಕ್ಟರ್ ಕೂಡ ಇಲ್ಲ. ನನ್ನ ಬರ್ತ್ಡೇ ಮೇ 30ಕ್ಕೆ ಸಿನಿಮಾ ತರಬೇಕು ಎಂಬ ಉದ್ದೇಶ ಇದೆ. ನಾನೇ ಎಲ್ಲವನ್ನೂ ಮಾಡಬೇಕು. ಹೀಗಾಗಿ ಟೈಮ್ ಆಗ್ತಾ ಇದೆ’ ಎಂದು ಹೇಳಿದರು.
ರವಿಚಂದ್ರನ್ ಘೋಷಣೆ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.
—–





Be the first to comment