ರವಿಚಂದ್ರನ್ ನಾಯಕನಾಗಿ ನಟಿಸಿರುವ ಕಾನೂನು ಥ್ರಿಲ್ಲರ್ ‘ದಿ ಜಡ್ಜ್ಮೆಂಟ್’ ಸಿನಿಮಾದ ನಾಯಕಿಯಾಗಿ ಮೇಘನಾ ಗಾಂವ್ಕರ್ ಆಯ್ಕೆ ಆಗಿದ್ದಾರೆ.
ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರು ‘ದಿ ಜಡ್ಜ್ಮೆಂಟ್’ ಸಿನಿಮಾ ಚಿತ್ರೀಕರಣವನ್ನು ಸೋಮವಾರ ಆರಂಭಿಸಿದ್ದಾರೆ. ದಿಗಂತ್, ಧನ್ಯ ರಾಮ್ ಕುಮಾರ್ ಮತ್ತು ಲಕ್ಷ್ಮಿ ಗೋಪಾಲಸ್ವಾಮಿ ಚಿತ್ರದ ಭಾಗವಾಗಿದ್ದಾರೆ.
ಎಲ್ಲಾ ಪಾತ್ರಗಳಿಗೂ ಹೊಂದಿಕೊಳ್ಳುವ ನಟಿಯ ಹುಡುಕಾಟದಲ್ಲಿದ್ದೆ, ಮೇಘನಾ ಆ ಪಾತ್ರಕ್ಕೆ ಪರಿಪೂರ್ಣ ಎನಿಸಿದರು. ನಾನು ಅವರನ್ನು ಫೈನಲ್ ಮಾಡುವ ಮೊದಲು ಒಂದೆರಡು ಬಾರಿ ಭೇಟಿಯಾದೆ ಎಂದು ನಿರ್ದೇಶಕ ಗುರುರಾಜ್ ಹೇಳಿದ್ದಾರೆ.
ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ನಟಿಸಿದ್ದ ಮೇಘನಾ ಚಿತ್ರದ ಯಶಸ್ಸಿನಲ್ಲಿ ಖುಷಿಯಾಗಿದ್ದಾರೆ.
ಚಿತ್ರಕ್ಕೆ ಖುಷ್ಭುಅವರನ್ನು ಕರೆತರುವ ಯತ್ನ ನಡೆದಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಚಿತ್ರದಲ್ಲಿ ಖುಷ್ಭು ಅವರು ಪ್ರಮುಖ ಪಾತ್ರ ನಿರ್ವಹಿಸಬೇಕೆಂದು ನಾನು ಬಯಸುತ್ತೇನೆ, ಈ ಸಂಬಂಧ ನಾವು ಮಾತುಕತೆ ನಡೆಸುತ್ತಿದ್ದೇವೆ. ಸದ್ಯ ಅವರು ಟ್ರಾವೆಲ್ಲಿಂಗ್ ನಲ್ಲಿದ್ದಾರೆ, ಶೂಟಿಂಗ್ ದಿನಾಂಕಗಳನ್ನು ಹೊಂದಿಸಿದ ನಂತರ ಅಂತಿ ಘೋಷಣೆ ಮಾಡಲಾಗುವುದು ಎಂದಿದ್ದಾರೆ.
ಜಿ9 ಕಮ್ಯುನಿಕೇಷನ್ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರಕ್ಕೆ ಎಂಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ.
ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್, ಗೀತರಚನೆಕಾರರಾಗಿ ಪ್ರಮೋದ್ ಮರವಂತೆ ಮತ್ತು ಛಾಯಾಗ್ರಾಹಕರಾಗಿ ಶಿವ ಬಿ ಕೆ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
—-

Be the first to comment