ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ರವಿಚಂದ್ರನ್ ಮನೆಯ ಮುಂದೆ ಅಭಿಮಾನಿಗಳು ಅವರ ದರ್ಶನ ಬಯಸಿ ಗಲಾಟೆ ಮಾಡಿದ್ದಾರೆ.
ರವಿಚಂದ್ರನ್ ಅವರು ಈ ವರ್ಷ ಹುಟ್ಟುಹಬ್ಬ ಆಚರಣೆಯಿಂದ ದೂರ ಉಳಿದಿದ್ದಾರೆ. ಜಡ್ಜ್ ಮೆಂಟ್ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ರವಿಚಂದ್ರನ್ ಅವರು ಹುಟ್ಟು ಹಬ್ಬದ ಕಾರಣದಿಂದ ಇಂದು ಮನೆಯಲ್ಲಿ ಇದ್ದಾರೆ. ಅಭಿಮಾನಿಗಳು ದೂರದ ಊರಿನಿಂದ ರವಿಚಂದ್ರನ್ ಅವರನ್ನು ನೋಡಲು ಬಂದಿದ್ದು, ರವಿಚಂದ್ರನ್ ಅವರು ಹುಟ್ಟುಹಬ್ಬ ಆಚರಿಸದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.
ರವಿಚಂದ್ರನ್ ಅವರು ಮನೆಯಿಂದ ಹೊರಗೆ ಬಂದು ಅಭಿಮಾನಿಗಳಿಗೆ ಮುಖದರ್ಶನ ನೀಡುವವರೆಗೆ ನಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ರವಿಚಂದ್ರನ್ ಅವರು ಹೊರಗೆ ಬಂದು ಮುಖದರ್ಶನ ನೀಡಬೇಕು. ನಾವು ಅವರಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ದೂರದಿಂದ ಅವರನ್ನು ನೋಡಿಕೊಂಡು ಹೋಗುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದ ಕಾರಣದಿಂದ ರವಿಚಂದ್ರನ್ ಅವರು ಮನೆಯಿಂದ ಹೊರಗೆ ಬಂದು ಅಭಿಮಾನಿಗಳನ್ನು ಭೇಟಿ ಆಗಲು ಆಸಕ್ತಿ ತೋರಿಲ್ಲ. ಅಭಿಮಾನಿಗಳ ಒತ್ತಾಸೆಗೆ ಮಣಿದು ಅವರು ಮುಖದರ್ಶನ ನೀಡುತ್ತಾರೆಯೇ ಎಂದು ಕಾದು ನೋಡಬೇಕಿದೆ.
___

Be the first to comment