Ravichandran: ಗುರುರಾಜ್ ಕುಲಕರ್ಣಿ ಸಿನಿಮಾದಲ್ಲಿ ರವಿಚಂದ್ರನ್

ಗುರುರಾಜ್ ಕುಲಕರ್ಣಿ ಮುಂದಿನ ಸಿನಿಮಾದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ.

ಅನೀಶ್ ಜೊತೆಗೆ ಗೌರಿ ಶಂಕರದಲ್ಲಿ ನಟಿಸುತ್ತಿರುವ ರವಿಚಂದ್ರನ್, ಗುರುರಾಜ್ ಕುಲಕರ್ಣಿ ಮುಂದಿನ ಸಿನಿಮಾಕ್ಕೆ ಒಪ್ಪಿಗೆ ನೀಡಿದ್ದಾರೆ.

ಇದು ಕಾನೂನು ಕಥಾಹಂದರ ಹೊಂದಿದ ಕಥೆಯಾಗಿದೆ. ಅಮೃತ್ ಅಪಾರ್ಟ್ಮೆಂಟ್ ನ ನಿರ್ದೇಶಕ, ಆಕ್ಸಿಡೆಂಟ್ ಹಾಗೂ ಲಾಸ್ಟ್ ಬಸ್ ನ ನಿರ್ಮಾಪಕ ಇದೇ ಮೊದಲ ಬಾರಿಗೆ ಈ ಸಿನಿಮಾ ಮಾಡುತ್ತಿದ್ದಾರೆ. ಏ.23 ರಂದು ಸಿನಿಮಾ ಅಧಿಕೃತವಾಗಿ ಸೆಟ್ಟೇರಲಿದೆ.

ಈ ಮುನ್ನ ತಂಡದಿಂದ ಚಿತ್ರದ ಶೀರ್ಷಿಕೆ ಘೋಷಣೆಯಾಗಲಿದೆ . ರವಿಚಂದ್ರನ್ ನಿರ್ವಹಿಸುತ್ತಿರುವ ಪಾತ್ರದ ವಿವರಗಳು ಹಾಗೂ ಫಸ್ಟ್ ಲುಕ್ ಬಹಿರಂಗವಾಗಲಿದೆ.

“ಕಥೆ ಕೇಳಿದ ಬಳಿಕ ರವಿಚಂದ್ರನ್ ಈ ಸಿನಿಮಾದ ಕಥೆ ಇಂದಿನ ಪೀಳಿಗೆಯೊಂದಿಗೆ ಕನೆಕ್ಟ್ ಆಗಲು ಅವಕಾಶ ನೀಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚಿತ್ರ ವಿವಿಧ ಫಾರ್ಮಾಟ್ ಗಳಲ್ಲಿ ಇಂದಿನ ದಿನಗಳ ಕಂಟೆಂಟ್ ಗೆ ಹೊಂದಾಣಿಕೆಯಾಗುತ್ತದೆ ಎಂದು ರವಿಚಂದ್ರನ್‌ ಹೇಳಿದರು ಎಂದು ನಿರ್ದೇಶಕ ಗುರುರಾಜ್ ಹೇಳಿದ್ದಾರೆ.

ಈ ಸಿನಿಮಾ ಮೂಲಕ ರವಿಚಂದ್ರನ್ ಅವರಿಗೆ ಹೊಸ ವೀಕ್ಷಕರು ಲಭ್ಯವಾಗಲಿದ್ದಾರೆ ಎನ್ನುವ ವಿಶ್ವಾಸ ಗುರುರಾಜ್ ಅವರದ್ದು ಆಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!