ಪ್ರೇಮಲೋಕ 2′ ಬಗ್ಗೆ ‘ಕ್ರೇಜಿ ಸ್ಟಾರ್’ ಅಪ್‌ಡೇಟ್‌

ಕ್ರೇಜಿ ಸ್ಟಾರ್ ರವಿಚಂದ್ರನ್‌ ಪ್ರೇಮಲೋಕ 2ʼ ಸಿನಿಮಾ ಕುರಿತು ಅಪ್‌ಡೇಟ್‌ ಹಂಚಿಕೊಂಡಿದ್ದಾರೆ.

ರಾಜಾಜಿನಗರದಲ್ಲಿ ಗ್ರ್ಯಾಂಡ್ ಆಗಿ ಬರ್ತ್​ಡೇ ಆಚರಿಸಿಕೊಂಡ ರವಿಚಂದ್ರನ್‌ , ”ಪ್ರೇಮಲೋಕ-2 ಟ್ರೈಲರ್ ರೆಡಿ ಇದೆ. ಗಜಿಬಿಜಿ ಆಗೋದು ಬೇಡ ಎಂದು ಇಂದು ಲಾಂಚ್ ಮಾಡಲಿಲ್ಲ. ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ. ನಾನು ನನ್ನ ಮಕ್ಕಳು ಮೂವರೂ ʻಪ್ರೇಮಲೋಕ 2ʼನಲ್ಲಿ ಇರ್ತೀವಿ. ʻಪ್ರೇಮಲೋಕʼ ಸಿನಿಮಾವನ್ನು ಅಂದಿನ ಕಾಲಕ್ಕೆ ಒಂದು ರೂಪಾಯಿ ಕೊಟ್ಟು ನೋಡಿದ್ರು. ಈಗ 2 ಸಾವಿರ ಕೊಟ್ಟು ನೋಡ್ತಿದ್ದಾರೆ” ಎಂದಿದ್ದಾರೆ.

”ಒಳ್ಳೆಯ ಸಿನಿಮಾ ಮಾಡಿದ್ರೆ ಜನ ಥಿಯೇಟರ್‌ಗೆ ಬರ್ತಾರೆ. ಯಶ್ ತಿಂಗಳಿಗೊಂದು ಸಿನಿಮಾ ಮಾಡೋಕೆ ಆಗಲ್ಲ. ಕೆಜಿಎಫ್ ಸಿನಿಮಾಗೆ ಆತ ಫೈಟ್ ಕೊಡಬೇಕು. ನಮಗೆ ಮಾರ್ಕೆಟ್ ಇಲ್ಲ. 10 ಸಿನಿಮಾ ಮಾಡೋಕೆ ನಾನು ರೆಡಿ. ಆದರೆ ಸಾವಿರ ಕೋಟಿ ರೂ. ನಮ್ಮ ಮೇಲೆ ಹಾಕೋರೇ ಇಲ್ಲ” ಎಂದಿದ್ದಾರೆ ರವಿಚಂದ್ರನ್‌.

ಪ್ರೇಮಲೋಕ ಚಿತ್ರಕ್ಕಾಗಿ ಜ್ಯೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದರು. ಆದರೆ ಈ ಬಾರಿ  ಚೆನ್ನೈ ಚೆಲುವೆ ತೇಜು ಅಶ್ವಿನಿ ನಟನೆ ಮಾಡುತ್ತಾರೆ ಎನ್ನುವ ಸುದ್ದಿ ಶುರುವಾಗಿದೆ.

ರವಿಚಂದ್ರನ್‌ ಅವರು ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!