ಯಕ್ಷಗಾನ ಪ್ರಸಂಗ ಆಧಾರಿತ ‘ವೀರ ಚಂದ್ರಹಾಸ’ ಚಿತ್ರ ರಾಜ್ಯಾದ್ಯಂತ ತೆರೆಕಂಡಿದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಚಿತ್ರತಂಡ ಭೇಟಿ ಕೊಟ್ಟಿದ್ದು ರವಿ ಬಸ್ರೂರು ಅವರು ಯಕ್ಷಗಾನ ವೇಷದಲ್ಲಿ ದೇವಿಯ ದರ್ಶನ ಪಡೆದರು.
ನಂತರ ಮಾತನಾಡಿದ ಚಿತ್ರದ ನಿರ್ದೇಶಕ ಹಾಗೂ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ‘ವೀರ ಚಂದ್ರಹಾಸ’ ನನ್ನ ಸುಮಾರು ವರ್ಷಗಳ ಕನಸು. ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಈ ಚಿತ್ರದ ಎಲ್ಲಾ ಪಾತ್ರಗಳನ್ನು ನಿಜವಾದ ವೃತ್ತಿಪರ ಯಕ್ಷಗಾನ ಕಲಾವಿದರು ನಿರ್ವಹಿಸಿದ್ದಾರೆ. ಚಿತ್ರ ತುಂಬಾ ನೈಜ್ಯವಾಗಿ ಮೂಡಿಬಂದಿದೆ. ವಿಶೇಷ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿನಯಿಸುವ ಮೂಲಕ ನಮಗೆ ಆಶೀರ್ವದಿಸಿದ್ದಾರೆ ಎಂದು ಹೇಳಿದರು.
ನಂತರ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಅವಧೂತ ಅರ್ಜುನ್ ಗುರೂಜಿ ಅವರ ಆಶೀರ್ವಾದ ಪಡೆದು ಅವರ ಜೊತೆ DRC ಮಾಲ್ ನಲ್ಲಿ ಪ್ರೇಕ್ಷಕರ ಜೊತೆ ರವಿ ಬಸ್ರೂರು ಚಿತ್ರ ವೀಕ್ಷಿಸಿದರು.
ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ‘ವೀರ ಚಂದ್ರಹಾಸ’ ಚಿತ್ರ ಅರ್ಪಿಸುತ್ತಿದೆ.
—-

Be the first to comment