ವೈರಲ್ ಆಯ್ತು ಪುನೀತ್ ಹಾಡಿದ ಸಾಂಗ್

ನಟ ಪುನೀತ್ ರಾಜ್‌ಕುಮಾರ್ ಹಾಡಿರುವ ‘ರತ್ನನ್ ಪ್ರಪಂಚ’ ಸಿನಿಮಾದ ಲಿರಿಕಲ್ ಹಾಡು ‘ ಗಿಚ್ಚಿ ಗಿಲಿ ಗಿಲಿ ‘ ಸಾಕಷ್ಟು ವೈರಲ್ ಆಗಿದೆ. ಅ.11ರಂದು ಬಿಡುಗಡೆ ಆಗಿರುವ ಈ ಹಾಡು ಇದುವರೆಗೆ 2.79 ಲಕ್ಷ ಜನರ ವೀಕ್ಷಣೆಗೆ ಪಾತ್ರವಾಗಿದೆ. ಪುನೀತ್ ಹಾಡಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಸಿನಿಮಾ ಅಕ್ಟೋಬರ್ 22 ಕ್ಕೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ಕೆಆರ್‌ಜೆ ಸ್ಟುಡಿಯೊ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಚಿತ್ರದ ನಿರ್ಮಾಪಕರಾಗಿದ್ದಾರೆ.

ಚಿತ್ರದಲ್ಲಿ ಧನಂಜಯ್ ಅವರ ಜೊತೆ ರೆಬಾ ಜಾನ್, ಶ್ರುತಿ, ಪ್ರಮೋದ್ ಶೆಟ್ಟಿ, ಅನು ಪ್ರಭಾಕರ್, ರವಿಶಂಕರ್ , ವೈನಿಧಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಹಲವು ನಟರು ನಟಿಸಿದ್ದಾರೆ.
ಈ ಸಿನಿಮಾದ ಟ್ರೈಲರ್ ಆಕರ್ಷಕವಾಗಿ ಮೂಡಿ ಬಂದಿದ್ದು ಈಗಾಗಲೇ ಚಿತ್ರಪ್ರೇಮಿಗಳ ಗಮನ ಸೆಳೆದಿದೆ. ಡಾಲಿ ಧನಂಜಯ್ ಅವರು ರತ್ನಾಕರ ಎನ್ನುವ ಪಾತ್ರ ನಿರ್ವಹಿಸಿದ್ದಾರೆ. ತನ್ನದೇ ಆದ ಪುಟ್ಟ ಪ್ರಪಂಚದಲ್ಲಿ ರತ್ನಾಕರ

ಅನುಭವಿಸುವ ಹಲವು ಘಟನೆಗಳನ್ನು ಚಿತ್ರ ಒಳಗೊಂಡಿರುವುದು ಟ್ರೈಲರ್ ನಲ್ಲಿ ಕಂಡು ಬಂದಿದೆ. ಚಿತ್ರದಲ್ಲಿ ಫೈಟ್ ಇದ್ದು ಆಕ್ಷನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!