‘ಫೋರ್ಬ್ಸ್’ ಬಿಡುಗಡೆ ಮಾಡಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಪಟ್ಟಿಯಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೌತ್ ಫಿಲಂ ಇಂಡಸ್ಟ್ರಿಯ ನಟ, ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಯಾರು ಹೆಚ್ಚು ಫಾಲೋಯರ್ಸ್ ಹೊಂದಿದ್ದಾರೆ? ಯಾರು ಹೆಚ್ಚು ಸಕ್ರಿಯರಾಗಿದ್ದು ಯಾರ ಪೋಸ್ಟ್ ಗಳಿಗೆ ಪ್ರತಿಕ್ರಿಯೆಗಳು ಹೆಚ್ಚಿಗೆ ಬರುತ್ತದೆ? ಯಾರು ಹೆಚ್ಚು ಹೆಚ್ಚು ಸೋಶಿಯಲ್ ಮೀಡಿಯಾ ಗಳನ್ನು ಇನ್‌ಫ್ಲ್ಯುಯೆನ್ಸ್ ಮಾಡುತ್ತಿದ್ದಾರೆ ಎನ್ನುವ ಎಲ್ಲಾ ಅಂಶಗಳನ್ನು ಆಧರಿಸಿ ಫೋರ್ಬ್ಸ್ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಸಮಂತಾರನ್ನು ಹಿಂದಕ್ಕೆ ಹಾಕಿ ರಶ್ಮಿಕಾ ಮಂದಣ್ಣ 9. 88 ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ.
ಸ್ಟಾರ್ ನಟ ವಿಜಯ್ ದೇವರಕೊಂಡ 9.67 ಪಾಯಿಂಟ್ ಗಳೊಂದಿಗೆ 2ನೇ ಸ್ಥಾನಗಳಿಸಿದ್ದಾರೆ. ಕನ್ನಡದ ಯಶ್ ಅವರು 9.54 ಪಾಯಿಂಟ್ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.
ಸಮಂತಾ ರುತ್ ಪ್ರಭು ನಾಲ್ಕು, ಅಲ್ಲು ಅರ್ಜುನ್ ಐದು, ದುಲ್ಕರ್ ಸಲ್ಮಾನ್ ಆರು, ಪೂಜಾ ಹೆಗ್ಡೆ 7, ಪ್ರಭಾಸ್ ಎಂಟು, ಸೂರ್ಯ ಒಂಬತ್ತು, ತಮನ್ನಾ ಭಾಟಿಯಾ 10 ನೇ ಸ್ಥಾನ ಪಡೆದಿದ್ದಾರೆ. ರಾಮ್ ಚರಣ್, ಜೂನಿಯರ್ ಎನ್ಟಿಆರ್,ವರುಣ್ ತೇಜ್, ಅಖಿಲ್, ಸಾಯಿ ಧರಮ್ ತೇಜ್ ಅವರು ಸಹ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಫೋರ್ಬ್ಸ್ ಯಶ್ ಅವರ ಮುಖಪುಟವನ್ನು ಪ್ರಕಟಿಸಿತ್ತು. ಈಗ ಗೌರವವನ್ನು ಹೊಂದಿದ ದಕ್ಷಿಣ ಭಾರತದ ಮೊದಲ ನಟ ಎನ್ನುವ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದರು.
________

Be the first to comment