ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ರೌಡಿಭಾಯ್ ವಿಜಯ್ ದೇವರಕೊಂಡ ಜೋಡಿ ಮುಂಬೈ ಹೋಟೆಲ್ ವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.
ಸಿಕಂದರ್ ಬಿಡುಗಡೆ ಖುಷಿಯಲ್ಲಿರುವ ರಶ್ಮಿಕಾ ಮಂದಣ್ಣ, ಗೆಳೆಯ ಎಂದು ಹೇಳಿಕೊಳ್ಳುವ ವಿಜಯ್ ದೇವರಕೊಂಡ ಜೊತೆ ಮುಂಬೈ ಖಾಸಗಿ ಹೋಟೆಲ್ ನಲ್ಲಿ ಲಂಚ್ ಮಾಡಿದ್ದಾರೆ. ಇಬ್ಬರು ಲಂಚ್ ಡೇಟಿಂಗ್ ಹೋಗಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಪಾಪಾರಾಜಿಗಳಿಂದ ತಪ್ಪಿಸಿಕೊಳ್ಳೋದಿಕ್ಕೆ ಮಾಸ್ಕ್ ಧರಿಸಿ ತಲೆಗೆ ಕ್ಯಾಪ್ ಹಾಕಿಕೊಂಡು ಬಂದಿದ್ದಾರೆ. ಇಬ್ಬರು ಬೇರೆ ಬೇರೆ ಕಾರ್‌ಗಳಲ್ಲಿ ಬಂದಿದ್ದಾರೆ. ಪಾಪರಾಜಿಗಳನ್ನು ನೋಡುತ್ತಿದ್ದಂತೆ ಮಾಸ್ಕ್ ತೆಗೆದು ರಶ್ಮಿಕಾ ನಗುತ್ತಲೇ ಪೋಸ್ ನೀಡಿದ್ದಾರೆ. ಆದರೆ ವಿಜಯ್ ದೇವರಕೊಂಡ ಗು ಮಾಸ್ಕ್ ಧರಿಸಿ ತಲೆಗೆ ಟೋಪಿ ತೊಟ್ಟು ಹೋಟೆಲ್ ಒಳಗೆ ಹೋಗಿದ್ದಾರೆ.
ಗೀತಾ ಗೋವಿಂದ, ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ನಟಿಸಿದ್ದಾರೆ. ವಿಜಯ್ ಮನೆಯಲ್ಲಿ ನಡುವೆಯುವ ಕಾರ್ಯಕ್ರಮಗಳಲ್ಲಿ ರಶ್ಮಿಕಾ ಹಾಜರಾತಿ ಇದ್ದೇ ಇರುತ್ತದೆ. ಇಬ್ಬರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಇದೆ ಅಂತಾ ಇಡೀ ಸಿನಿರಂಗ ಮಾತನಾಡಿಕೊಳ್ಳುತ್ತಿದೆ. ಆದರೆ ವಿ ಜಯ್ ರಶ್ಮಿಕಾ ಮಾತ್ರ ವಿಆರ್ ಜಸ್ಟ್ ಫ್ರೆಂಡ್ ಎನ್ನುತ್ತಲೇ ಕದ್ದು ಮುಚ್ಚಿ ಡೇಟಿಂಗ್ ಮಾಡುತ್ತಿದ್ದಾರೆ.
—-

Be the first to comment